Breaking
6 May 2026, Wed

ಬ್ಯೂಟಿಪಾರ್ಲರ್ಗೆ ತೆರಳಿದ್ದ ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ

ಮಂಗಳೂರು: ವಿವಾಹದ ಹಿಂದಿನ ದಿನ ವಧು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಳಾರದ ನಾರಾಯಣ ಎಂಬುವವರ ಪುತ್ರಿ ಪಲ್ಲವಿ (22) ಕಾಣೆಯಾದ ವಧು.

ಯುವತಿಯ ಒಪ್ಪಿಗೆಯಂತೆ ನಿಶ್ಚಿತಾರ್ಥ ನಡೆದಿದ್ದು, ಎ.16 ರಂದು ವಿವಾಹ ನಿಗದಿ ಪಡಿಸಲಾಗಿತ್ತು. ಎ.15 ರಂದು ಮಧ್ಯಾಹ್ನ ಮೆಹಂದಿ ಹಾಕಲೆಂದು ಬ್ಯೂಟಿಪಾರ್ಲ‌ರ್ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ವಾಪಸ್ ಬಾರದಿದ್ದನ್ನು ಕಂಡು ಗಾಬರಿಗೊಂಡು ಮನೆಯವರು ಯುವತಿಗೆ ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಯುವತಿಯ ಮನೆಯವರು ದೂರಿನಲ್ಲಿ ತಿಳಿಸಿದ್ದಾರೆಂದು ವರದಿಯಾಗಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ.

Leave a Reply

Your email address will not be published. Required fields are marked *