Breaking
6 May 2026, Wed

ಉಡುಪಿ: ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆ: ಸಿಸಿಟಿವಿ ಪರೀಶೀಲನೆ ನಡೆಸುತ್ತಿರುವ ಪೊಲೀಸರು

ಉಡುಪಿ: ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾದ ಘಟನೆ ಉಡುಪಿಯ ಮಲ್ಪೆ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ನಡೆದಿದೆ.ಮಸೀದಿಗೆ ಸಂಬಂಧಿಸಿದ ಎರಡು ಮಹಡಿಯ ಕಟ್ಟಡದಲ್ಲಿರುವ ಕೆಲಸಗಾರರಿಗೆ ಕಟ್ಟಡ ಬದಿಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಅಲ್ಲಿ ಎಪ್ರಿಲ್ 14 ರಂದು ನವಜಾತ ಶಿಶುವಿನ ದೇಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮಸೀದಿಯ ವ್ಯವಸ್ಥಾಪಕ ಸುಹೇಲ್ ಅವರು ಶೌಚಾಲಯಕ್ಕೆ ಹೋದಾಗ ಮಗುವಿನ ಮೃತದೇಹ ಕಂಡುಬಂದಿದೆ..ತಕ್ಷಣವೇ ಅವರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು ಶಿಶು ಜನನಕ್ಕೆ ಮೊದಲೇ ಅಥವಾ ಬಳಿಕ ಮೃತಪಟ್ಟಿದ್ದು, ಯಾರೋ ಅಪರಿಚಿತರು ಮಗುವಿನ ಜನನ ವನ್ನು ಮರೆಮಾಚಲು ಯತ್ನಿಸಿ ಇಲ್ಲಿ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳೀಯ ಸಿಸಿಟಿವಿ ಪರೀಶೀಲನೆ ನಡೆಸುತ್ತಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *