Breaking
6 May 2026, Wed

ಉಡುಪಿ:ಮಸೀದಿಯೊಂದರ ಶೌಚಾಲಯದಲ್ಲಿ ಮಗು ಪತ್ತೆ ಪ್ರಕರಣ ಸುಖಾಂತ್ಯ: ಎಸ್‌ಪಿ ಡಾ.ಕೆ.ಅರುಣ್ ಪ್ರತಿಕ್ರಿಯೆ

ಉಡುಪಿ: ಉಡುಪಿಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಮಸೀದಿಯೊಂದರ ಶೌಚಾಲಯದಲ್ಲಿ ಮಗು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಕ್ರಮ ಕೈಗೊಳ್ಳಲಾಗಿದ್ದು ಮಗು ಸ್ಥಳೀಯರಾಗಿರುವ ಆಫ್ರಿನಾ ಎಂಬವರದ್ದು ಆಗಿದೆ.

ಈಗಾಗಲೇ ಅವರಿಗೆ ಒಂದು ಮಗು ಇದ್ದು ,ಇನ್ನೊಂದು 7 ರಿಂದ 8 ತಿಂಗಳ ಗರ್ಭವನ್ನು ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ವೈದ್ಯಕೀಯ ನೆರವು ತೆಗೆದು ಕೊಳ್ಳದೆ ಇವರೇ ಪ್ರಯತ್ನಿಸಿದ್ದಾರೆ.

ಬಳಿಕ ತೀರ ಹೊಟ್ಟೆ ನೋವಿನಿಂದ ಬಳಲಿ ಮಸೀದಿಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಆಕೆ ಮಗುವನ್ನು ಅಲ್ಲಿಯೇ ಬಿಟ್ಟು ತೆರಳಿರುವುದಾಗಿ ತಿಳಿದು ಬಂದಿದೆ.

ಪ್ರಸ್ತುತ ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಬಿಡುಗಡೆಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಮಲ್ಪೆಯ ಜಂಕ್ಷನ್‌ಲ್ಲಿರುವ ಜಾಮೀಯ ಮಸಿದೀಗೆ ಸಂಬಂಧಿಸಿದ ಕಟ್ಟಡ ಶೌಚಾಲಯದಲ್ಲಿ ಎ.14 ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದಿತ್ತು.

ಈ ಬಗ್ಗೆ ಮಸೀದಿ ವತಿಯಿಂದ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Leave a Reply

Your email address will not be published. Required fields are marked *