Breaking
21 Mar 2026, Sat

ಎರಡು ಕಾರುಗಳು ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಅಪಾಯದಿಂದ ಪಾರು

ಬೆಳ್ತಂಗಡಿ:ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಮುಂಡಾಜೆ-ಧರ್ಮಸ್ಥಳ ರಸ್ತೆಯ ಕೊಂಬಿನಡ್ಕ ಶಾಲೆ ಸಮೀಪದ ಕೆದಿಹಿಷ್ಣುವಿನಲ್ಲಿ ನಡೆದಿದೆ.

ಘಟನೆಯಲ್ಲಿ ಎರಡೂ ಕಾರುಗಳಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಕಾರು ಮೋರಿಯಲ್ಲಿ ಸಿಲುಕದೆ ಕೆಳಗಡೆ ಹರಿಯುವ ಹಳ್ಳಕ್ಕೆ ಬೀಳುತ್ತಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇತ್ತು.

ಈ ರಸ್ತೆಯಲ್ಲಿ ಸುಮಾರು 6 ಕಡೆ ಅಗಲ ಕಿರಿದಾಗ ಕಿರು ಸೇತುವೆಗಳಿದ್ದು, ಇವು ಅಪಾಯಕಾರಿಯಾಗಿವೆ.ಇದರಿಂದ ಆಗಾಗ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *