Breaking
6 May 2026, Wed

ನರಿಕೊಂಬು: ಒಂದು ವಾರದ ಭಜನಾ ತರಬೇತಿ ಶಿಬಿರಕ್ಕೆ ಚಾಲನೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ತುಂಬೆ ವಲಯ ವತಿಯಿಂದ ಶ್ರೀ ಕೋದಂಡರಾಮ ಭಜನಾ ಮಂಡಳಿ ಅಂತರ ರಾಮನಗರ ನರಿಕೊಂಬು ಇದರ ಸಹಯೋಗದೊಂದಿಗೆ ನಡೆಯಲಿರುವ ಒಂದು ವಾರದ ಭಜನಾ ತರಬೇತಿ ಶಿಬಿರಕ್ಕೆ ಏ.13ರಂದು ಚಾಲನೆ ನೀಡಲಾಯಿತು.
ಶ್ರೀ ಕೋದಂಡರಾಮ ಭಜನಾ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ʼಮಕ್ಕಳಿಗೆ ನಮ್ಮ ಮೂಲ ಸಂಸ್ಕಾರ, ಸಂಸ್ಕೃತಿ ಜೊತೆಗೆ ಏಕಾಗ್ರತೆಗೆ, ನೆನಪಿನ ಶಕ್ತಿ ವೃದ್ಧಿಸಲು ಭಜನೆ ಸಹಕಾರಿಯಾಗಿದೆ ಎಂದರು.

ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಕಿಶೋರ್ ಶೆಟ್ಟಿ ಅಂತರ, ಪ್ರಗತಿಪಾರ ಕೃಷಿಕ ಪ್ರೇಮನಾಥ್ ಶೆಟ್ಟಿ ಅಂತರ, ಕೋದಂಡರಮ ಭಜನಾ ಮಂದಿರ ಅಧ್ಯಕ್ಷ ಚಂದ್ರಶೇಖರ ಗೌಡ, ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್, ಅಳಿಯೂರು, ಭಜನೆ ತರಬೆತುದಾರರಾದ ಸಂದೇಶ್, ಗಗನ್, ಆಕಾಶ್, ಮೊದಲಾದವರು ಉಪಸ್ಥಿತರಿದ್ದರು.

ಮಕ್ಕಳು ಪ್ರಾರ್ಥಿಸಿ, ನರಿಕೊಂಬು ಎ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿ, ಭಜನಾ ಮಂಡಳಿ ಸದಸ್ಯ ಗಣೇಶ್ ಕುಮಾರ್ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿದಿಗಳಾದ ಕುಸುಮಾವತಿ ಹಾಗೂ ಪ್ರತಿಭಾ ಸಹಕರಿಸಿದರು.

Leave a Reply

Your email address will not be published. Required fields are marked *