Breaking
21 Mar 2026, Sat

ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ  ಕು.ಲಿಖಿತಾ. ಆರ್. ಸಾಲ್ಯಾನ್ ಗೆ ಸಿ.ಪ್ರಾ.ಕೃ.ಪ.ಸ.ಸಂಘದಿಂದ ಸನ್ಮಾನ

ಸಿದ್ದಕಟ್ಟೆ: ರಾಜ್ಯ ಮಟ್ಟದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಲಿಖಿತಾ. ಆರ್. ಸಾಲ್ಯಾನ್ ಅವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು, ಉಪಾಧ್ಯಕ್ಷರಾದ ಸಂದೇಶ್ ಶೆಟ್ಟಿ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಕೋಟಿಯಪ್ಪ ಪೂಜಾರಿ,ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್ ನ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಸ್ಥಾಪಕ ಅಧ್ಯಕ್ಷರಾದ ಮೈಕಲ್ ಡಿ’ಕೊಸ್ತ,, ಮೂಡಬಿದ್ರೆ ಆಂಜನೇಯ ದೇವಸ್ಥಾನ ಪ್ರಧಾನ ಅರ್ಚಕರಾದ ನಾಗೇಂದ್ರ ಭಟ್, ಮಂಗಳೂರು ಸಿ. ಸಿ. ಟೇಕ್ ಮ್ಯಾನೇಜರ್ ರವೀಂದ್ರ ಖೇಣಿ, ಟೈಲರಿಂಗ್ ಮತ್ತು ಪ್ಯಾಷನ್ ಡಿಸೈನ್ ನಿಂಗ್ ತರಬೇತಿದಾರೆ ಪ್ರೇಮಾ, ಉದ್ಯಮಿ ವೀಣಾ ಭಾಸ್ಕರ್ ನಾಯಕ್,ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿಗಾರ್ ಸಂಗಬೆಟ್ಟು, ಶಿವ ಗೌಡ, ಜಾರಪ್ಪ ನಾಯ್ಕ, ಮಂದಾರತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಅಧ್ಯಕ್ಷ ಶಿವಯ್ಯ.ಎಚ್.,ರೋಟರಿ ಕ್ಲಬ್ ಲೋರಟ್ಟೋ ಹಿಲ್ಸ್ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಡಿಗೋಳಿ, ಹರಿಪ್ರಸಾದ್ ಶೆಟ್ಟಿ, ಸೀತರಾಮ ಶೆಟ್ಟಿ, ರಾಮಚಂದ್ರ ಶೆಟ್ಟಿಗಾರ್, ವಿಜಯ ಪೆರ್ನಾಂಡಿಸ್,ಆರಂಬೊಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಹುಲಿಮೇರು, ನಿವೃತ್ತ ಶಿಕ್ಷಕರಾದ ನಾರಾಯಣ ನಾಯಕ್ ಉಪಸ್ಥಿತರಿದ್ದರು.

ಚಂದ್ರಿಕಾ ಸ್ವಾಗತಿಸಿ, ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *