Breaking
20 Jun 2026, Sat

ಐತಿಹಾಸಿಕ ವಕ್ಷ್ ತಿದ್ದುಪಡಿ ಮಸೂದೆ 2025 ದ್ವಿಸದನದಲ್ಲೂ ಅಂಗೀಕಾರಗೊಂಡು ಸಾರ್ವಜನಿಕ ವಲಯದಲ್ಲಿ ಸಂಭ್ರಮ ತಂದಿದೆ :ಪ್ರಭಾಕರ ಪ್ರಭು

Prabhu

ಸಿದ್ದಕಟ್ಟೆ : ಭಾರತದ ಶತಕೋಟಿ ಜನರ ಬಹು ನಿರೀಕ್ಷೆಯ ವಕ್ಷ್ ತಿದ್ದುಪಡಿ ಮಸೂದೆ 2025 ಕ್ಕೆ ಲೋಕಸಭೆ ಹಾಗೂ ರಾಜ್ಯಸಭೆ ಗಳೆಡರಲ್ಲಿಯೂ ಬಹುಮತದೊಂದಿಗೆ ಅಂಗೀಕೃತ ಗೊಂಡು ಹಿಂದಿನ ಕಳಂಕಿತ ಮಸೂದೆಗೆ ಬ್ರೇಕ್ ಬಿದ್ದಿದೆ. ಇದರಿಂದಾಗಿ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯವಾಗಿ ವಶಪಡಿಸಿಕೊಂಡು ಕಬಳಿಸಿದ ಲಕ್ಷಾಂತರ ಎಕರೆ ಕೃಷಿ ಹಾಗೂ ಕೃಷಿಯೇತರ ಭೂಮಿ ಯನ್ನು ರಕ್ಷಣೆ ಮಾಡಿದಂತಾಗಿದ್ದು, ಭಾರತೀಯರೆಲ್ಲರಿಗೂ ಸಮಾನ ಹಕ್ಕು ಮತ್ತು ಸಮಾನ ನ್ಯಾಯ ಸಿಕ್ಕಿದಂತಾಗಿದೆ ಎಂದು ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿಹಾಗೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು.

ಈ ಹಿಂದಿನ ಅಸಮರ್ಪಕ ಮಸೂದೆಯಲ್ಲಿನ ಸಾಧಕ ಭಾದಕ ಗಳ ಬಗ್ಗೆ ಅಧ್ಯಯನ ಮಾಡಿ ಹೊಸ ನಿಯಮಗಳನ್ನು ಸೇರಿಸಿಕೊಂಡು ಮಸೂದೆ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟು ಭಾರತಕ್ಕೆ ಭವಿಷ್ಯದಲ್ಲಿ ಎದುರುರಾಗುವ ತೊಂದರೆಗಳನ್ನು ಶಮನ ಮಾಡಿರುವ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದೀಜಿ ಹಾಗೂ ತಂಡಕ್ಕೆ ಮತ್ತು ತಿದ್ದುಪಡಿಯ ಹೊಸ ಮಸೂದೆ 2025 ನ್ನು ಬೆಂಬಲಿಸಿ ಮತ ನೀಡುವುದರೊಂದಿಗೆ ಮಸೂದೆ ರೂಪುಗೊಳ್ಳಲು ಕಾರಣಿ ಕರ್ತರಾದ ಲೋಕಸಭೆಯ ಹಾಗೂ ರಾಜ್ಯ ಸಭೆಯ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಬಂಟ್ವಾಳ ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *