Breaking
21 Mar 2026, Sat

ದೈಯಡ್ಕ:ಶ್ರೀ ರಕ್ತೇಶ್ವರಿ ಸಪರಿವಾರ ದೈವಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ರಕ್ತೆಶ್ವರಿ ಸಪರಿವಾರ ದೈವಗಳ ಸಾನಿದ್ಯ ಕ್ಷೇತ್ರ ದೈಯಡ್ಕ ಇಲ್ಲಿ ಮೇ 08ಹಾಗೂ 09ರಂದು ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ಸಮಾರಂಭ ಎ. 30ರಂದು ಸುಜೀರು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು.

ಶ್ರೀ ಮಂಗಳಾದೇವಿ ದೇವಸ್ಥಾನದ ಹಿರಿಯ ಅರ್ಚಕರಾದ ಅನಂತ್ ಭಟ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾದ್ಯಕ್ಷ ಐತಪ್ಪ ಆಳ್ವ ಸುಜೀರ್ ಗುತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅದ್ಯಕ್ಷ ಪ್ರತಾಪ್ ಆಳ್ವ ಸುಜೀರ್ ಗುತ್ತು. ಜೀರ್ಣೋದ್ಧಾರ ಸಮಿತಿಯ ಅದ್ಯಕ್ಷ ಅಶೊಕ್ ಶೆಟ್ಟಿ ಸುಜೀರ್ ಗುತ್ತು. ವಿಶು ಕುಮಾರ್, ಗಣೇಶ ಭಟ್ . ಚಂದ್ರಶೇಖರ ಗಾಂಬಿರ ಸುಜೀರ್ ಗುತ್ತು.ಸತೀಶ್ ಶೆಟ್ಟಿ ಸುಜೀರ್ ಹೊಸಮನೆ.ಅಶಿತ್ ಶೆಟ್ಟಿ ಸುಜೀರ್ ಗುತ್ತು.ಕಿಶೊರ್ ಕುಮಾರ್ ಸುಜೀರ್. ಕಾರ್ಯದ್ಯಕ್ಷರಾದ ದಾಮೊದರ್ ಸಪಲ್ಯ ಅರ್ಮಿ, ಜೀರ್ಣೋದ್ದಾರ ಸಮಿತಿಯ ಪ್ರ. ಕಾರ್ಯದರ್ಶಿ ಗಣೇಶ್ ದತ್ತನಗರ, ಪ್ರವೀಣ್ ಶೆಟ್ಟಿ ಸುಜೀರ್ ಹಾಗೂ ಸರ್ವ ಭಕ್ತರು ಉಪಸ್ಥಿತರಿದ್ದರು.

ಕೊಶಾದಿಕಾರಿ ಸುರೆಂದ್ರ ಕಂಬಳಿ ಸುಜೀರ್ ಬೀಡು ಸ್ವಾಗತಿಸಿ.ಅಶೊಕ್ ಶೆಟ್ಟಿ ಧನ್ಯವಾದ ವಿತ್ತರು.

Leave a Reply

Your email address will not be published. Required fields are marked *