Breaking
21 Mar 2026, Sat

2024 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಯ ಇನ್ಸ್ಪೆಕ್ಟರ್ ಶ್ರೀ ಶಿವಕುಮಾರ್ ಬಿ ಆಯ್ಕೆ

ಬಂಟ್ವಾಳ : ದಕ್ಷತೆಗಾಗಿ ಪೊಲೀಸ್ ಅಧಿಕಾರಿಗಳಿಗೆ ನೀಡುವ ಮುಖ್ಯಮಂತ್ರಿ ಪದಕದ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರ ಪಟ್ಟಿ ಯನ್ನು ಇಂದು ಸರ್ಕಾರ ಪ್ರಕಟಿಸಿದೆ.

ಈ ಪದಕಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಯ ಇನ್ಸ್ಪೆಕ್ಟರ್ ಶ್ರೀ ಶಿವಕುಮಾರ್ ಬಿ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಹಿರಿಯ IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿದಂತೆ ಒಟ್ಟು 197 ದಕ್ಷ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ನೀಡಲಾಗಿದೆ.

ದಕ್ಷಿಣ ಕನ್ನಡ ದಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಆಗರ್ವಾಲ್,ಮಂಗಳೂರು ವಲಯ DIG ಅಮಿತ್ ಸಿಂಗ್,ಮಂಗಳೂರು ಉಪ-ವಲಯದ ಎಸಿಪಿ ಶ್ರೀಮತಿ ಧನ್ಯ ಎನ್ ನಾಯಕ,ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್.ಎಂ., ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಉಳ್ಳಾಲ ಠಾಣೆಯ ಎಸ್ಸೈ ಸಂತೋಷ್ ಕುಮಾರ್ ಎಸ್., ಸುರತ್ಕಲ್ ಠಾಣೆಯ ಎಸ್ಸೈ ರಾಘವೇಂದ್ರ ಮಂಜುನಾಥ ನಾಯ್ಕ್, ಕಂಕನಾಡಿ ನಗರ ಠಾಣೆಯ ಎಚ್‌ಸಿ ರೆಜಿ ವಿ.ಎಂ., ಮಂಗಳೂರು ಸಿಸಿಬಿ ಘಟಕದ ಎಸ್ಸೈ ಶೀನಪ್ಪ, ಎಆರ್‌ಎಸ್‌ಐ ರಿತೇಶ್, ಎಚ್‌ಸಿಗಳಾದ ಆಂಜನಪ್ಪ, ಭೀಮಪ್ಪ ಉಪ್ಪಾರ, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ, ವಿಜಯ ಶೆಟ್ಟಿ, ಪಿಸಿಗಳಾದ ಪುರುಷೋತ್ತಮ, ಶ್ರೀಧರ, ಪ್ರಕಾಶ್ ಸತ್ತಿಹಳ್ಳಿ, ಅಭಿಷೇಕ್, ಸುರತ್ಕಲ್ ಠಾಣೆಯ ಎಚ್‌ಸಿಗಳಾದ ಅಣ್ಣಪ್ಪ, ಉಮೇಶ್ ಕುಮಾರ್, ಸೆನ್ ಠಾಣೆಯ ಎಸ್ಸೈ ಗುರಪ್ಪ ಕಾಂತಿ, ಎಚ್‌ಸಿ ಪ್ರವೀಣ್ ಎಂ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಏಪ್ರಿಲ್ 2 ರ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪದಕ ವಿತರಣೆ ಸಮಾರಂಭ ನಡೆಯಲಿದೆ.

Leave a Reply

Your email address will not be published. Required fields are marked *