Breaking
21 Jun 2026, Sun

ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ – ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಮಹಿಳಾ ದಿನಾಚರಣೆ ಯ ಪ್ರಯುಕ್ತ ಕಾರ್ಯಾಗಾರ

ಬಂಟ್ವಾಳ: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ – ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಇಂದು ಮಹಿಳಾ ದಿನಾಚರಣೆ ಯ ಪ್ರಯುಕ್ತ ಕಾರ್ಯಾಗಾರವನ್ನು  ತುಳು ಶಿವಳ್ಳಿ ಸಭಾಭವನ(ರಿ), ಬಿ.ಸಿ. ರೋಡ್ ನಲ್ಲಿ ಹಮ್ಮಿ ಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಭಾಗ್ಯಮ್ಮರವರು ದೀಪ ಬೆಳಗಿಸುವದರ ಮೂಲಕ  ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿದರು. ನಂತರ ಮಹಿಳಾ ದಿನಾಚರಣೆಯ  ಮಹತ್ವದ ಬಗ್ಗೆ ವಿವರವಾಗಿ ಮಾತಾಡಿದರು.

ಅಧಿವಕ್ತಾ ಪರಿಷತ್ ನ ಜಿಲ್ಲಾ ಅಧ್ಯಕ್ಷರಾದ  ಶ್ರೀಮತಿ ಪುಷ್ಪಲತ ಯು.ಕೆ. ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧಿವಕ್ತಾ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷರಾದ ಉಮಾ ಏನ್ ಸೋಮಯಾಜಿಯವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಕಾರ್ಯಾಗಾರದ ಪ್ರಥಮ ಅವಧಿಯಲ್ಲಿ ಮಹಿಳೆ ಮತ್ತು ಕಾನೂನು ಎಂಬ ವಿಷಯದ ಬಗ್ಗೆ ಮೂಡಬಿದ್ರೆ ಯ ವಕೀಲರಾದ ಶ್ವೇತಾ ಜೈನ್ ರವರು ಉಪನ್ಯಾಸವನ್ನು ನೀಡಿದರು. ಎರಡನೇ ಅವಧಿಯಲ್ಲಿ ಕೆ. ವಿ. ಜೆ. ಅಮರ ಜ್ಯೋತಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಡಾl ಶ್ರೀಮತಿ ಯಶೋಧ ರಾಮಚಂದ್ರ ರವರು ಸ್ವಾಸ್ತ್ಯ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಾಗಾರದ ಕೊನೆಗೆ ಸಮಾರೋಪ ಸಭಾರಂಭದಲ್ಲಿ ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಹಾಗೂ ವಕೀಲರು ಆದ ಶ್ರೀ ಗುರುಪ್ರಸಾದ್ ಶೆಟ್ಟಿ ಅಧಿವಕ್ತಾ ಪರಿಷತ್ ನಾ ಕಾರ್ಯ ಮತ್ತು ವಿಸ್ತಾರದ ಬಗ್ಗೆ ಮಾಹಿತಿ ನೀಡಿ ಒಂದು ದಿನದ ಕಾರ್ಯಾಗಾರ ವನ್ನು ಮುಕ್ತಾಯಗೊಳಿಸಿದರು.

ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಧ ತಾಲೂಕು ಘಟಕಗಳ ಅಧಿವಕ್ತಾ ವಕೀಲರು, ಬ್ರಾಮ್ಮಣ ಮಹಿಳಾ ಸಂಘದ ಸದಸ್ಯರು, ಮಹಿಳಾ ಸಂಘಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಕೀಲರಾದ ಆಶಾಮಣಿ ರೈ ಯವರು ಕಾರ್ಯಕ್ರಮ ನಿರೂಪಿಸಿದರು. ಉಮಾ ಏನ್ ಸೋಮಯಾಜಿ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಮೂಡಬಿದ್ರೆಯ ವಕೀಲರಾದ ಮೇಘನಾ  ಧನ್ಯವಾದ ಸಲ್ಲಿಸಿದರು

Leave a Reply

Your email address will not be published. Required fields are marked *