ಮಾರ್ಚ್ 20 ಗುರುವಾರದಂದು ಸಿದ್ದಕಟ್ಟೆಗೆ ನಂದಿ ರಥ ಯಾತ್ರೆ ಆಗಮನ

ಬಂಟ್ವಾಳ: ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಮತ್ತು ಗೋ ರಕ್ಷಣೆಗಾಗಿ ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ರಾಜ್ಯದಾದ್ಯಂತ ನಂದಿ ರಥಯಾತ್ರೆಯನ್ನು ಆರಂಭಿಸಿದ್ದು, ಈ ರಥ ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಒಟ್ಟು 90 ದಿನಗಳ ಕಾಲ ಈ ನಂದಿ ರಥ ರಾಜ್ಯದ ಎಲ್ಲಾ ತಾಲೂಕುಗಳನ್ನು ಸುತ್ತಿ, ಏಪ್ರಿಲ್ 6 ರಂದು ಕದ್ರಿಯಲ್ಲಿ ಇದರ ಸಮಾರೋಪ ನಡೆಯಲಿದೆ.

1ಕೋಟಿ ಗೋಮಯ ದೀಪ ಬೆಳಗಿಸುವುದು, 1,11,1೦8 ವಿಷ್ಣು ಸಹಸ್ರ ನಾಮ ಪಾರಾಯಣ, 108 ಸ್ಥಾನಗಳಲ್ಲಿ ಗವ್ಯ ಉತ್ಪನ್ನ ಮಾರಾಟ ಕೇಂದ್ರ ಪ್ರಾರಂಭ, ಆರೋಗ್ಯಯುತ, ಸ್ವಾವಲಂಬಿ, ಸುಸಂಪನ್ನ, ಸಮೃದ್ಧ, ವಿಶ್ವಗುರು ಭಾರತ, ನಂದಿಯಿಂದ ಫಲವತ್ತಾದ ಮಣ್ಣು ಉಳಿಸಿ, ಶುದ್ಧ ನೀರು, ಗಾಳಿ, ಪರಿಸರ ಸಂರಕ್ಷಣೆಯ ಗುರಿಯೊಂದಿಗೆ ಮಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಳಗಿನ ಕೇಂದ್ರಗಳಲ್ಲಿ ಸಂಜೆ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಗೋಕತೆಯೊಂದಿಗೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.

ಬಂಟ್ವಾಳದ ಪೊಳಲಿ ದೇವಸ್ಥಾನದಿಂದ ಡಿಸೆಂಬರ್ 31, 2024 ರಂದು ರಥಯಾತ್ರೆಯನ್ನು ಆರಂಭಿಸಲಾಗಿದ್ದು ಇದು ರಾಜ್ಯಾಧ್ಯಂತ ಸಂಚರಿಸಿ, ಇದೀಗ ಮಾರ್ಚ್ 20 ಗುರುವಾರ ಸಂಜೆ 5 ಗಂಟೆಗೆ ಸಿದ್ದಕಟ್ಟೆ ಶ್ರೀರಾಮ ನಗರಕ್ಕೆ ಆಗಮಿಸಲಿದೆ.

ಸಿದ್ದಕಟ್ಟೆ ಶ್ರೀರಾಮ ನಗರ ದಿಂದ ಸಿದ್ದಕಟ್ಟೆ ಪಲ್ಗು ಣಿ ಕಾಂಪ್ಲೆಕ್ಸ್ ವರೆಗೆ ಕುಣಿತ ಭಜನೆ ಮೂಲಕ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಗುವುದು.ತದನಂತರ ಮೆರವಣಿಗೆ ಮೂಲಕಸಿದ್ದಕಟ್ಟೆ ಮಾರುಕಟ್ಟೆ ಎದುರುಗಡೆ ಇರುವ ಪಲ್ಗು ಣಿ ಕಾಂಪ್ಲೆಕ್ಸ್ನ ಮುಂಭಾಗದ ವೇದಿಕೆಯಲ್ಲಿ ವಿಷ್ಣು ಸಹಸ್ರನಾಮ ಪಠನೆ ಮಾಡುವ ಮೂಲಕ ಕಾರ್ಯಕ್ರಮ ಕ್ಕೆ ವಿದ್ಯುಕ್ತ ಚಾಲನೆ ನೀಡಲಾಗುವುದು.ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.

ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಪ್ರತಾಪ್ ಶೆಟ್ಟಿ ಕುಂಡಾಜೆ ವಹಿಸಲಿದ್ದಾರೆ. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ)ನ ಭಕ್ತಿಭೂಷಣ್ ದಾಸ್ ಗೋ ಕಥಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಗ್ರಾಮ ವಿಕಾಸ ಮಂಗಳೂರು ವಿಭಾಗ ಟೋಳಿ ಸದಸ್ಯೆ ಶ್ರೀಮತಿ ರಮಿತಾ ಶೈಲೆಂದ್ರ ಬೌದ್ಧಿಕ್ ನಡೆಸಿಕೊಡಲಿದ್ದಾರೆ.

ಎಲ್ಲಾ ಭಗವತ್ ಭಕ್ತರು ಈ ಪುಣ್ಯ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ನಂದಿ ರಥಯಾತ್ರೆ ಆಯೋಜನ ಸಮಿತಿ ಸಿದ್ದಕಟ್ಟೆ ವಿನಂತಿಸಿದೆ.

Leave a Reply

Your email address will not be published. Required fields are marked *