Breaking
22 Mar 2026, Sun

ಪುಣಚ  ನೀರುಮಜಲು ಗರಡಿಯಲ್ಲಿ ವರ್ಷಾವಧಿ ನೇಮೋತ್ಸವ

ವಿಟ್ಲ: ಪುಣಚ ಗ್ರಾಮದ ನೀರುಮಜಲು ಬ್ರಹ್ಮಶ್ರೀ ಬೈದರ್ಕಳ ಗರಡಿಯಲ್ಲಿ ವರ್ಷಾವಧಿ ನೇಮೋತ್ಸವ ಮಾ.12 ರಂದು ನಡೆಯಿತು.

ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಶುದ್ಧ ಕಲಶಾಧಿ ಹೋಮ ನಡೆಯಿತು. ಬಳಿಕ ಆಯುಧ ಒಪ್ಪಿಸುವುದು, ಮಾಯಾಂದಾಳ್ ದೇವಿಯ ನರ್ತನ ಉತ್ಸವ, ಪೂಜಾರಿಗಳ ಸೇಟು, ಬೈದರ್ಕಳ ಸೇಟು ನಡೆಯಿತು.

ಗುರುವಾರ ಮುಂಜಾನೆ ಪ್ರಸಾದ ವಿತರಣೆ ನಡೆಯಿತು.ಮಧ್ಯಾಹ್ನ ಮತ್ತು ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ನೇಮೋತ್ಸವದಲ್ಲಿ ಊರ ಪರವೂರ ಗಣ್ಯರು, ಮಿತ್ರರು, ಸಹಸ್ರಾರು ಭಕ್ತಾದಿಗಳು ಪ್ರಸಾದ್ ಸ್ವೀಕರಿಸಿದರು. ನೀರು ಮಜಲು ಗರಡಿಡ ಆಡಳಿತ ಮುಖ್ಯಸ್ಥರಾದ ಸಂಕಪ್ಪ ಪೂಜಾರಿ ನೀರು ಮಜಲು, ಸೀತಾರಾಮ ಪೂಜಾರಿ ನೀರುಮಜಲು, ಗರಡಿ ಮನೆಯ ನಾರಾಯಣ ಪೂಜಾರಿ ನೀರುಮಜಲು ಅವರ ನೇತೃತ್ವದಲ್ಲಿ ನೇಮೋತ್ಸವ ನಡೆಯಿತು.

Leave a Reply

Your email address will not be published. Required fields are marked *