Breaking
19 Sep 2026, Sat

ಬಹು ಸಂಖ್ಯಾತ ಹಿಂದುಗಳಿಗೆಪ್ರಾತಿನಿಧ್ಯತೆ ಇಲ್ಲದ ಅಲ್ಪ ಸಂಖ್ಯಾತ ಪರವಾದ ಇಷ್ಟವರೆಗೂ ಕಂಡರಿಯದ ಕಹಿ ಬಜೆಟ್ :ಪ್ರಭಾಕರ ಪ್ರಭು

Prabhu

ಸಿದ್ದಕಟ್ಟೆ : ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಬಹುಪಾಲು ಹಣಕಾಸಿನ ನೆರವು ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಟ್ಟಿದ್ದು ಬಹು ಸಂಖ್ಯಾತ ಹಿಂದೂ ಸಮುದಾಯದ ಪ. ಜಾತಿ, ಪ. ಪಂಗಡ ಸೇರಿದಂತೆ ಶೇ 70 ರಷ್ಟು ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ ದ ಅಧ್ಯಕ್ಷ ಪ್ರಭಾಕರ ಪ್ರಭು ಕಿಡಿ ಕಾರಿದ್ದಾರೆ .

ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಗೆ ಆದ್ಯತೆ ನೀಡಿಲ್ಲ. ಕಳೆದ ಸಾಲಿನ ಬಜೆಟ್ ನಲ್ಲಿ ರೈತರಿಗೆ ಶೂನ್ಯ ಬಡ್ಡಿಯಲ್ಲಿ 5 ಲಕ್ಷ ಹಾಗೂ ಕೃಷಿ ಅಭಿವೃದ್ಧಿ ಸಾಲ 15 ಲಕ್ಷ ಕ್ಕೆ ಏರಿಕೆ ಮಾಡಿದ್ದು ಇನ್ನೂ ಅನುಷ್ಠಾನವಾಗಿಲ್ಲ ಹಾಗಾಗಿ ಇದೊಂದು ರಾಜಕೀಯ ಪ್ರೇರಿತ ಹಾಗೂ ವೋಟ್ ಬ್ಯಾಂಕ್ ಗಿಮಿಕ್ ಪರವಾಗಿರುವ ಇಷ್ಟರವರೆಗೆ ಯಾರು ಕಂಡರಿಯದ ಪ್ರಚಾರ ಬಜೆಟ್ ಹೊರತು ಅನುಷ್ಠಾನಕ್ಕೆ ಸಾಧ್ಯವಾದ ಬಜೆಟ್ ಅಲ್ಲ, ಎಂದು ಅವರು ಟೀಕಿಸಿದರು.

Leave a Reply

Your email address will not be published. Required fields are marked *