ಬಂಟ್ವಾಳ : ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ,ರಾಯಿ ಕೊಯಿಲ ಅರಳ ಇದರ ನೂತನ ಗುರುಮಂದಿರ ಹಾಗೂ ಸಮುದಾಯ ಭವನದ ಲೋಕಾರ್ಪಣೆ ಪ್ರತಿಷ್ಠಾಪನಾ ಮಹೋತ್ಸವ ಮೇ 10, 11ರಂದು ನಡೆಯಲಿದ್ದು, ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಜಯಪ್ರಕಾಶ್ ಜೆ.ಎಸ್. ಆಯ್ಕೆಯಾಗಿದ್ದಾರೆ.
ಸಮಿತಿ ಗೌರವಾಧ್ಯಕ್ಷರಾಗಿ ಕೆ.ಹರಿಕೃಷ್ಣ ಬಂಟ್ವಾಳ, ಭುವನೇಶ್ ಪಚಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ದೇವಪ್ಪ ಕರ್ಕೇರ ನೆಕ್ಕರೆಗುಳಿ, ಕೋಶಾಧಿಕಾರಿಯಾಗಿ ಧರ್ಮರಾಜ್ ದಡ್ಡು, ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ರಾಯಿ ಬೆಟ್ಟು, ಜಗದೀಶ್ ಕೊಯಿಲ, ಶಿವರಾಮ ಅರಳ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

