Breaking
22 Mar 2026, Sun

ಪುಣಚ: ಹಿಂದೂ ರುದ್ರಭೂಮಿ ಉದ್ಘಾಟನೆ

ವಿಟ್ಲ: ಪುಣಚ ಹಿಂದೂ ರುದ್ರಭೂಮಿ ( ಮುಕ್ತಿಧಾಮ) ಲೋಕಾರ್ಪಣೆ ಗೊಂಡಿತು.ಉದ್ಘಾಟನೆ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ ಜಾತಿ ಮತಗಳ ಭೇದವನ್ನು ಬದಿಗಿಟ್ಟು ಗ್ರಾಮಸ್ಥರು ಒಟ್ಟಾಗಿ ಸಾಗಿದಾಗ ಅಭಿವೃದ್ಧಿ ಸಾಧ್ಯ. ಊರಿನ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಜನರು ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ರುದ್ರಭೂಮಿ ಗೆ ಇನ್ನಷ್ಟು ಅನುದಾನದ ಅಗತ್ಯ ವನ್ನು ಗಮನಿಸಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಅಧ್ಯಕತೆ ವಹಿಸಿದ್ದ ಪುಣಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಮೈ ಜನಾರ್ದನ ಭಟ್, ಊರಿಗೆ ರುದ್ರಭೂಮಿಯ ಅವಶ್ಯಕತೆ ಇತ್ತು. ಮುಕ್ತಿಧಾಮದಲ್ಲಿ ಇನ್ನಷ್ಟು ಮೂಲ ಸೌಕರ್ಯಗಳ ಆಗಬೇಕು. ಎಲ್ಲರ ಆರ್ಥಿಕ ಸಹಕಾರ ಬೇಕು.ನಮ್ಮ ಸಹಕಾರ ಸಂಘದಿಂದಲೂ ಒಂದು ಲಕ್ಷ ರೂ.ಗಳ ನೆರವು ನೀಡಲಾಗಿದೆ ಎಂದು ಹೇಳಿದರು.

ಹಿಂದೂ ರುದ್ರಭೂಮಿಯನ್ನು ಪುಣಚ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೇಬಿ ಪಟಿಕಲ್ಲು ಉದ್ಘಾಟಿಸಿದರು.ಸಮಾರಂಭದ ವೇದಿಕೆಯಲ್ಲಿ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ, ಪುಣಚ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಂಶೀಲಾ, ಪುಣಚ ಮಹಿಷ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ರವಿ ಬಿ. ಕೆ .ಮೊದಲಾದವರು ಉಪಸ್ಥಿತರಿದ್ದರು.

ಪುಣಚ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಕಲ್ಪವೃಕ್ಷ ಫ್ರೆಂಡ್ಸ್ ಕ್ಲಬ್ ತುರ್ತು ವಾಹನ ಮಾಲಕ- ಚಾಲಕರಾದ ಜಗದೀಶ ರೈ ಚನಿಲ, ಪ್ರಕಾಶ ಪಾಟಾಳಿ ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪುಣಚದ ಸಭಾ ಕಾರ್ಯಕ್ರಮದ ಬಳಿಕ ಶಾಸಕ ಅಶೋಕ್ ಕುಮಾರ್ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ರಮೇಶ್ ಭೇಟಿ ನೀಡಿದರು.

ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಜಯಲಕ್ಷ್ಮೀ ಪ್ರಾರ್ಥನೆಗೀತೆ ಹಾಡಿದರು‌.ಪುಣಚ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ವಂದಿಸಿದರು. ಜಗನ್ನಾಥ ಎಸ್ ಕಾರ್ಯಕ್ರಮ ‌ನಿರೂಪಿಸಿದರು.

Leave a Reply

Your email address will not be published. Required fields are marked *