Breaking
22 Mar 2026, Sun

ಸ. ಉ. ಪ್ರಾ. ಶಾಲೆ ಹೊಕ್ಕಾಡಿಗೋಳಿಯಲ್ಲಿ ಮೆಟ್ರಿಕ್ ಮೇಳ

ಹೊಕ್ಕಾಡಿಗೋಳಿ: ದಿನಾಂಕ 28.2.2025 ಶುಕ್ರವಾರದಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಇಲ್ಲಿ ಮೆಟ್ರಿಕ್ ಮೇಳ ನಡೆಯಿತು.

ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಶ್ರೀ ದಿನೇಶ್ ಹುಲಿಮೇರು ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದು ಮೆಟ್ರಿಕ್ ಮೇಳದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಭಾಕರ್ ಹುಲಿಮೇರು,ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ವ್ಯಾಪಾರ ಮಾಡಿ ಮಕ್ಕಳಿಗೆ ಉತ್ತಮ ಪ್ರೋತ್ಸಾಹ ನೀಡಿದರು.

ವಿದ್ಯಾರ್ಥಿಗಳು ಈ ಮೇಳದಲ್ಲಿ ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು ಹಂಪಲುಗಳು, ತಿಂಡಿ ತಿನಿಸುಗಳು,ಆಟದ ಸಾಮಗ್ರಿಗಳು, ಲೇಖನ ಸಾಮಗ್ರಿಗಳನ್ನು ಮಾರಾಟಕ್ಕಿಟ್ಟಿದ್ಧು ಎಲ್ಲರನ್ನು ಆಕರ್ಷಿಸಿತು. ಮೆಟ್ರಿಕ್ ಮೇಳವು ನಿತ್ಯ ಜೀವನದಲ್ಲಿ ಮಕ್ಕಳ ವ್ಯವಹಾರ ಜ್ಞಾನ ವೃದ್ಧಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ಉತ್ತಮ ಕಾರ್ಯಕ್ರಮವಾಗಿದೆ.

Leave a Reply

Your email address will not be published. Required fields are marked *