Breaking
11 Jul 2025, Fri

ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ಜೊತೆಗೂಡಿ ಪೊರಕೆ ಹಿಡಿದು ಶಾಲಾ ಅಂಗಳಕ್ಕೆ ಸಗಣಿ ಸಾರಿಸಿದ ಶಾಲಾ ಶಿಕ್ಷಕಿಯರು

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ವತಿಯಿಂದ ಶ್ರಮದಾನ ಸೇವಾ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಪ್ರಥಮಿಕ ಶಾಲೆಯಲ್ಲಿ ಜರುಗಿತು.

ಶಾಲೆಯ ಅಂಗಳ ಹಾಗೂ ಶಾಲಾ ಕಾಂಪೌಂಡ್ ಸ್ವಚ್ಛ ಮಾಡಿ ಅಂಗಳಕ್ಕೆ ಸೆಗಣಿ ಸಾರಿಸುವ ಕೆಲಸ ಕಾರ್ಯ ಮಾಡಿದರು. ಈ ಸಂದರ್ಭ ಸ್ವತಃ ಶಾಲಾ ಶಿಕ್ಷಕಿಯರು ಶೌರ್ಯ ತಂಡದ ಜೊತೆ ಸೇರಿಕೊಂಡು ಪೊರಕೆ ಹಿಡಿದು ಶಾಲಾ ಅಂಗಳಕ್ಕೆ ಸಗಣಿ ಸಾರಿಸಿದರು. ಜೊತೆಗೆ ಸಗಣಿ ಸಾರಿಸುಧರ ಮಹತ್ವ ಅಗತ್ಯತೆಗಳ ಬಗ್ಗೆ ಮಕ್ಕಳಿಗೂ ತಿಳಿಹೇಳಿದರು.

ಶ್ರಮದಾನ ಸೇವಾ ಕಾರ್ಯದಲ್ಲಿ ಕಲ್ಲಡ್ಕ ಶೌರ್ಯ ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರಬೆಟ್ಟು, ಘಟಕದ ಸಂಯೋಜಕಿ ವಿದ್ಯಾ ಸದಸ್ಯರುಗಳಾದ ತುಳಸಿ, ಸಂತೋಷ್ ಬೊಲ್ಪೊಡಿ , ಚಿನ್ನಾ ಕಲ್ಲಡ್ಕ, ಎಸ್ ಡಿ ಎಂ ಸದಸ್ಯರಾದ ಗೀತಾ ಮೈರಾ, ಪೋಷಕರಾದ ಗೀತಾ ಸುಧಾಕರ್ ವೀರಕಂಭ, ಶಾಲಾ ಶಿಕ್ಷಕಿಯರು , ಶಾಲಾ ಆಯಾ ಮೀನಾಕ್ಷಿ ಸುನಿಲ್ ಭಾಗವಹಿಸಿದ್ದರು.

ಕೂಸಮ್ಮ ಮೈರಾ, ರಂಜಿತಾ ಉಮೇಶ್ ಮಜಿ, ಕೃಷ್ಣಪ್ಪ ಪೂಜಾರಿ ಗಾಣದಮೂಲೆ ಬೇಕಾದಷ್ಟು ಸೆಗಣಿ ನೀಡಿ ಸಹಕರಿಸಿದರು.

ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಇದ್ದುದರಿಂದ ಮುಂಚಿತವಾಗಿ ಶಾಲಾ ಅಂಗಣ ಸ್ವಚ್ಛಗೊಳಿಸಿ ಸೆಗಣಿ ಸಾರಿಸಿ ಶಾಲೆಯ ಅಂದವನ್ನು ಹೆಚ್ಚಿಸಿದ್ದಕ್ಕಾಗಿ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮಂಡೋನ್ಸಾ ರವರು ಕೃತಜ್ಞತೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *