ಬಂಟ್ವಾಳ : ಗಾಯತ್ರಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ನಿಯಮಿತ, ಮೆಲ್ಕಾರ್ ಬಂಟ್ವಾಳ ತಾಲೂಕು ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ಸ್ಥಾನಗಳಿಗೂ ಸಹಕಾರಿ ಪ್ರಕೋಷ್ಟದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷರಾಗಿ ಅಡ್ಯೆ ವಿಷ್ಣು ಭಟ್, ಉಪಾಧ್ಯಕ್ಷರಾಗಿ ಮೋಹನ್ ಆಚಾರ್ಯ, ನಿರ್ದೇಶಕರುಗಳಾಗಿ ರಾಜಾರಾಮ್ ಭಟ್ ಟಿ. ಜಿ, ಶಾರದಾ ಎಸ್ ರಾವ್, ಜಯ ಶಂಕರ ಬಾಸ್ರಿತ್ತಾಯ, ಲಕ್ಷ್ಮೀನಾರಾಯಣ ಉಡುಪ, ನಾಗರಾಜ್ ಭಟ್. ಪಿ, ರಾಜರಾಮ ಐತಾಳ್, ಗಣಪತಿ ಸೋಮಯಾಜಿ. ಕೆ, ಕೃಷ್ಣಮೂರ್ತಿ. ಜಿ, ಜಯಲಕ್ಷ್ಮಿ .ಜಿ.ಎಂ, ಆಯ್ಕೆಯಾಗಿರುತ್ತಾರೆ.
ಚುನಾವಣಾ ಅಧಿಕಾರಿಯಾಗಿ ಗೋಪಾಲ್ ರವರು ಕಾರ್ಯನಿರ್ವಹಿಸಿದರು. ನಂತರ ನಡೆದ ಅಭಿನಂದನಾ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರುಗಳು,ಸಹಕಾರಿ ಪ್ರಕೋಷ್ಟದ ಸಂಚಾಲಕ ಜಯರಾಮ.ರೈ. ಉಪಸ್ಥಿತರಿದ್ದರು.


