Breaking
21 Mar 2026, Sat

ಭೀಮ್‌ರಾವ್‌ ಆರ್ಮಿ ಕರ್ನಾಟಕ ಹೊಸಂಗಡಿ ಇದರ ವತಿಯಿಂದ ದಿ.ಹರಿಪ್ರಸಾದ್‌ ಪಿ. ಇವರ ಸ್ಮರಣಾರ್ಥ ಸಾರ್ವಜನಿಕ ಆಂಬುಲೆನ್ಸ್‌ ಲೋಕಾರ್ಪಣೆಯ ಉದ್ಘಾಟನಾ ಕಾರ್ಯಕ್ರಮ

ಬೆಳ್ತಂಗಡಿ: ಭೀಮ್‌ರಾವ್‌ ಆರ್ಮಿ ಕರ್ನಾಟಕ ಹೊಸಂಗಡಿ ಇದರ ವತಿಯಿಂದ ದಿ.ಹರಿಪ್ರಸಾದ್‌ ಪಿ. ಇವರ ಸ್ಮರಣಾರ್ಥ ಸಾರ್ವಜನಿಕ ಆಂಬುಲೆನ್ಸ್‌ ಲೋಕಾರ್ಪಣೆಯ ಉದ್ಘಾಟನಾ ಕಾರ್ಯಕ್ರಮ ಸಂತೃಪ್ತಿ ಸಭಾಭವನ ಪೆರಿಂಜೆಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಪಡ್ಯಾರಬೆಟ್ಟುವಿನ ಧರ್ಮದರ್ಶಿ ಶ್ರೀ ಎ. ಜೀವಂದರ್‌ ಕುಮಾರ್‌ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಹರಿಪ್ರಸಾದ್‌ ಅವರ ಸಮಾಜ ಸೇವೆಯನ್ನು ಗುರುತಿಸಿ ಭೀಮ್‌ ರಾವ್‌ ಆರ್ಮಿ ಹೊಸಂಗಡಿ ಸಂಘಟನೆಯು ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಅವರ ಹೆಸರಿನಲ್ಲಿ ಆಂಬುಲೆನ್ಸ್‌ ಸೇವೆಯನ್ನು ನೀಡಿದ ನಿಮ್ಮ ಸಂಘಟನೆಗೆ ಶುಭವಾಗಲಿ ಎಂದೂ ಹಾರೈಸಿದರು.

ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೊಸಂಗಡಿ ಗ್ರಾಮ ಪಂಚಯತ್‌ ಅಧ್ಯಕ್ಷರಾಗಿರುವ ಶ್ರೀ ಜಗದೀಶ್‌ ಹೆಗ್ಡೆ ಇವರು ಮಾಲಾರ್ಪಣೆಯನ್ನು ಮಾಡಿ ಶುಭ ಹಾರೈಸಿದರು.ಆಳ್ವಾಸ್‌ ಹೆಲ್ತ್‌ ಸೆಂಟರ್‌ನ ಡಾ.ವಿನಯ್‌ ಆಳ್ವ ಮಾತನಾಡಿ ದಿ| ಹರಿಪ್ರಸಾದ್‌ ನಮ್ಮಿಂದ ಮರೆಯಾದರೂ ಅವರು ಸಮಾಜಕ್ಕೆ ನೀಡಿದ ಸೇವೆ ಎಂದೂ ಅಮರ ಅವರ ಹೆಸರಿನಲ್ಲಿ ʻʻ ಹರಿಪ್ರೇರಣಾ ಜೀವ ರಕ್ಷಕ ಆಂಬುಲೆನ್ಸ್‌ ʼʼಸೇವೆಯನ್ನು ನೀಡಿದ ಭೀಮ್‌ರಾವ್‌ ಆರ್ಮಿ ಸಂಘಟನೆಯ ಈ ಕಾರ್ಯಕ್ಕೆ ಮೆಚ್ಚಲೇಬೇಕು ಎಂದರು.
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ. ಪೆರಾಡಿ ಇದರ ಅಧ್ಯಕ್ಷರಾಗಿರುವ ಶ್ರೀ ಸತೀಶ್‌ ಕಾಶಿಪಟ್ನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು ,ಭೀಮ್‌ರಾವ್‌ ಆರ್ಮಿ ಸಂಘಟನೆಯ ಈ ಸಮಾಜಮುಖಿ ಕಾರ್ಯವನ್ನು ಶ್ಲಾಘನೀಯ, ಸಂಘಟನೆಯ ಜೊತೆ ನಿಂತು ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ʻಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್‌ನʼ ಮಾಲಕರಾಗಿರುವ ಶ್ರೀಪತಿ ಭಟ್‌, ದಿ| ಹರಿಪ್ರಸಾದ್‌ ಅವರ ಸಹೋದರ ಮಾಜಿ ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಶ್ರೀ ಪಿ. ಧರಣೇಂದ್ರ ಕುಮಾರ್‌, ಮೂಡಬಿದ್ರೆಯ ವಕೀಲರಾದ ನಾಗೇಶ್‌ ಶೆಟ್ಟಿ, ಶ್ರೀ ಗುರು ಕಮ್ಯೂನಿಕೇಶನ್‌ನ ಮಾಲಕರಾಗಿರುವ ಶ್ರೀ ರಾಘವೇಂದ್ರ ಭಟ್‌, ದ.ಕ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿರುವ ಶ್ರೀ ಶೇಖರ್‌ ಕುಕ್ಕೇಡಿ, ಮೂಡಬಿದ್ರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಶ್ರೀ ಪ್ರವೀಣ್‌ ಜೈನ್‌ ಶಿರ್ತಾಡಿ, ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಶ್ರೀ ಸೀತಾರಾಮ ರೈ, ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ಶ್ರೀ ಇಸ್ಮಾಯಿಲ್‌ ಕೆ, ಮಾಜಿ ತಾಲೂಕು ಪಂಚಾಯತ್‌ ಸದಸ್ಯ ಶ್ರೀ ಓಬಯ್ಯ ಆರಂಬೋಡಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶ್ರೀ ಗಣೇಶ್‌ ಶೆಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಪೆರಾಡಿ ಇದರ ಉಪಾಧ್ಯಕ್ಷರಾಗಿರುವ ಶ್ರೀಪತಿ ಭಟ್‌, ಉದ್ಯಮಿಗಳಾಗಿರುವ ಲಕ್ಷ್ಮಣ್‌ ಜಿ.ಎಸ್‌, ಸಿದ್ಧಕಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿರುವ ರೊ.ಶಿವಯ್ಯ ಎಸ್.ಎಲ್‌, ಸುಹಾನ್‌ ಪ್ಲೋರಿಂಗ್ಸ್‌ ಮಾಲಕರು ಸುಶಾಂತ್‌ ಕರ್ಕೇರ ಉಪಸ್ಥಿತರಿದ್ದರು.

ಭೀಮ್‌ರಾವ್ ಆರ್ಮಿ ಸಂಘಟನೆಯ ಜೊತೆ ಕಾರ್ಯದರ್ಶಿ ಪ್ರವೀಣ್‌ ಸೂರ್ಯ ಕಾರ್ಯಕ್ರಮ ನಿರೂಪಿಸಿ, ಭೀಮ್‌ರಾವ್‌ ಆರ್ಮಿ ಸಂಘಟನೆಯ ಅಧ್ಯಕ್ಷರಾಗಿರುವ ಶ್ರೀ ಗುರು ಪ್ರಸಾದ್‌ ಸ್ವಾಗತಿಸಿ, ಸುರೇಶ್‌ ಎಚ್.ಹೊಕ್ಕಾಡಿಗೋಳಿ ವಂದಿಸಿದರು.

Leave a Reply

Your email address will not be published. Required fields are marked *