Breaking
23 Mar 2026, Mon

ನಂದಿಕೇಶ್ವರ ನಾಟಕ ಸಂಘ ಮಂಗಳೂರು ಅರ್ಪಿಸುವ ರಾಷ್ಟ್ರಮಟ್ಟದ ಕರೋಕೆ ಗಾಯನ ಕಾರ್ಯಕ್ರಮ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ

ಉಡುಪಿ: ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಅರ್ಪಿಸುವ ರಾಷ್ಟ್ರಮಟ್ಟದ ಕರೋಕೆ ಗಾಯನ ಕಾರ್ಯಕ್ರಮ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಒಂದು ಹೆಜ್ಜೆ ರಕ್ತದಾನಿಗಳ ಬಳಗ ಉಡುಪಿ ಜಿಲ್ಲೆ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ದಿನಾಂಕ 16.2.2025ನೇ ಭಾನುವಾರ ಬೆಳಗ್ಗೆ 8:00ರಿಂದ ಸಂಜೆ 6 ಗಂಟೆಯವರೆಗೆ ಹೋಟೆಲ್ ಮಥುರ ಕಂಫರ್ಟ್ ಶ್ರೀ ಕೃಷ್ಣಮಠ ಪಾರ್ಕಿಂಗ್ ಪ್ರದೇಶ ಬೈಲಕೆರೆಯಲ್ಲಿ ನಡೆಯಲಿದೆ.

ಉಡುಪಿಯಲ್ಲಿ ಮೊಟ್ಟ ಮೊದಲ ಬಾರಿಗೆ ಗಾಯಕರಿಗೆ ಈ ಒಂದು ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಇವರು ನಡೆಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ. ರಾಜ್ಯದ್ಯಕ್ಷರು ಭಾರತೀಯ ಮಾನವ ಹಕ್ಕುಗಳ ಮಂಡಳಿ ಪ್ರಸಾದ್ ರೈ ರವರು, ನಟ ನಿರ್ದೇಶಕ ನಿರ್ಮಾಪಕ ಕಲಾಭೂಮಿ ಪ್ರತಿಷ್ಠಾನ ಅಧ್ಯಕ್ಷರಾದ ಆಸ್ಕರ್ ಕೃಷ್ಣ, ನಟ ನಿರ್ದೇಶಕ ನಿರ್ಮಾಪಕರಾದ ಶ್ರೀ ನಂದನ್ ರವರು, ಸಂಸ್ಥಾಪಕರು ಸ್ಯಾಂಡಲ್ವುಡ್ ಫಿಲಂ ಇನ್ಸ್ಟಿಟ್ಯೂಟ್ ನಾ ಆನಂದ್ ಕಲ್ಪತರು ರವರು, ಸಂಸ್ಥಾಪಕರು ಕರೋಕೆ ಮ್ಯೂಸಿಕಲ್ ಕ್ಲಬ್ ಉಡುಪಿ ಯ ಮದನ್ ಮಣಿಪಾಲ್ ರವರು ಸಂಸ್ಥಾಪಕರು ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ನಾ ಪ್ರಕಾಶ್ ಕಾಮತ್ ರವರು, ಗಾಯಕರಾದ ವಿಲ್ತ್ರೆಡ್ ವಿಜಯ ಡೇಸ ರವರು ಪತ್ರಕರ್ತರಾದ ಪ್ರಕಾಶ್ ಸುವರ್ಣ ರವರು ಕಲಾವಿದರಾದ ನಾಗೇಶ್ ಕಾಮತ್ ರವರು ಭಾಗವಹಿಸಲಿದ್ದಾರೆ

ಇದೇ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಿಂದ ಸಾಧಕರಾದ ಸೋಮನಾಥ ಶೆಟ್ಟಿ ನಟರು ನಿರ್ದೇಶಕರು, ಜೋಸೆಫ್ ಲೋಬೋ ಶಂಕರಪುರ ಕೃಷಿ ಕ್ಷೇತ್ರ, ರೀಶಲ್ ಮೆಲ್ಬಾ ಕ್ರಾಸ್ತ ಬಾಲ ಪ್ರತಿಭೆ, ಮಾಸ್ಟರ್ ಆಯುಷ್ ಮೆನೇಜಸ್ ಬಾಲ ಪ್ರತಿಭೆ ಇವರಿಗೆ ಗೌರವಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಲಿದ್ದಾರೆ.

ನೀಮಾ ಲೋಬೋ ಶಂಕರಪುರ, ರಕ್ತದಾನಿ ಮಂಜು ಮೈಸೂರು, ನಿಂಗರಾಜು ಮಂಡ್ಯ ಇವರುಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಜಿ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಮೀನನಾಥ ಮಂಗಳೂರು ಬರಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *