Breaking
23 Mar 2026, Mon

ಕುಡುಬಿ ಸಮಾಜ ಸೇವಾ ಸಂಘ: ರಾಜ್ಯ ಮಟ್ಟದ ಕಬಡ್ಡಿ:ಕೋರ್ಯಾರು ಶ್ರೀ ದುರ್ಗಾಮಹಮ್ಮಾಯಿ ತಂಡಕ್ಕೆ ಪ್ರಶಸ್ತಿ

ಬಂಟ್ವಾಳ : ದ.ಕ.ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಕೊಂಪದವು, ಯುವ ಜನ ಮತ್ತು ಕ್ರೀಡಾ ವೇದಿಕೆ ಇದರ ಆಶ್ರಯದಲ್ಲಿ ಮಂಗಳೂರು ತಾ. ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಕಾರದಲ್ಲಿ ಮಿಜಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ಕುಡುಬಿ ಬಾಂಧವರ ಪ್ರಥಮ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕೊರ್ಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನದ ಕುಡುಬಿ ಸಮಾಜದ ಸದಸ್ಯರು ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿರುತ್ತಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚತುರ್ಥ, ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಹಾಗೂ ಸಾರ್ವಜನಿಕ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.

ದೇವಸ್ಥಾನದ ಗುರಿಕಾರ ಗೋಪಾಲ ಗೌಡ, ತಂಡದ ವ್ಯವಸ್ಥಾಪಕಾರದ ಹೇಮಚಂದ್ರ ಗೌಡ, ಉಮೇಶ್ ಗೌಡ, ದೇವಣ್ಣ ಗೌಡ, ಕರುಣಾಕರ ಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *