Breaking
14 May 2026, Thu

ವಿಶ್ವ ವಿಜಯ ಪತ್ರಿಕೆಯ 20ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಹುಬ್ಬಳ್ಳಿ: ಇಂದು ಡಾ. ಬಿಆರ್ ಅಂಬೇಡ್ಕರ್ ಸಭಾಭವನ ಸಂಗೊಳ್ಳಿ ರಾಯಣ್ಣ ನಗರ ಶ್ರೀ ಶನೇಶ್ವರ ದೇವಸ್ಥಾನದ ಹಿಂದೆ ಇರುವ ಬೈರಿ ದೇವರ ಕೊಪ್ಪಳ ಹುಬ್ಬಳ್ಳಿಯಲ್ಲಿ ವಿಶ್ವ ವಿಜಯ ಪತ್ರಿಕೆಯ 20ನೇ ವಾರ್ಷಿಕೋತ್ಸವ ದ ಅಂಗವಾಗಿ ರಾಜ್ಯದ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕೃಷಿ ಸಾಧಕ “ಜೋಸೆಫ್ ಲೋಬೋ ಶಂಕರಪುರ ಇವರಿಗೆ “ರೈತ ರತ್ನ ರಾಷ್ಟ್ರೀಯ ಪ್ರಶಸ್ತಿ 2025” ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂತರಾಷ್ಟ್ರೀಯ ಪಾಲಿಭಾಷಾ ತಜ್ಞರು ಧಾರವಾಡ ದ ದಿವ್ಯ ಸಾನಿಧ್ಯ ಆಯುಷ್ಮಾನ್ ಶ್ರೀ ಶ್ರೀ ಪಬ್ಬಸ್ವರವಿತಿಪಾಲಿವಿಜ್ಞಾ ಮುನಿಯ ರವರು,ಶ್ರೀ ಆನಂದ್ ಬಸವರಾಜ್ ಗಂಗಾವತಿ ಸಿಲ್ಕ್ ಪ್ಯಾಲೇಸ್ ಇವರು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಪಾಟೀಲ್ ರವರು ಅಧ್ಯಕ್ಷರು ಪ್ರಗತಿಪರ ರೈತರು ಮತ್ತು ಹಲವಾರು ಗಣ್ಯರು ಉಪನ್ಯಾಸಕರು ಪತ್ರಿಕಾ ಮಾಧ್ಯಮದವರು ಹಾಜರಿದ್ದರು

Leave a Reply

Your email address will not be published. Required fields are marked *