ಮೈಸೂರು: ಇತ್ತೀಚಿಗೆ ಕೊಕ್ಕೋ ವಿಶ್ವಕಪ್ ಜಯಭೇರಿ ಬಾರಿಸಲು ಪ್ರಮುಖ ಪಾತ್ರ ವಹಿಸಿದ ಕುಮಾರಿ ಚೈತ್ರ ರವರಿಗೆ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ವಿಶೇಷ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ದಿನಾಂಕ 6.2.2025ನೇ ಗುರುವಾರ ಸಂಜೆ 6 ಗಂಟೆಗೆ ರಮಾ ಗೋವಿಂದ ರಂಗಮಂದಿರ ರಾಮಕೃಷ್ಣ ನಗರ ಮೈಸೂರು ನಡೆಯಲಿದೆ ಎಂದು ಅಧ್ಯಕ್ಷರಾದ ಸಿ ಬಸವರಾಜು ರವರು ಮತ್ತು ( kSDMA) ನಿರ್ದೇಶಕರಾದ ರಕ್ತದಾನಿ ಮಂಜು ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ




