Breaking
19 Sep 2026, Sat

ರಾಯಿ: ಗಣೇಶೋತ್ಸವ ಸಮಿತಿಯಿಂದ ಕೊಯಿಲ ಶಾಲಾ ಬಸ್ಸಿಗೆ ಎರಡು ಟಯರ್ ಕೊಡುಗೆ

ಬಂಟ್ವಾಳ: ರಾಯಿ ಪೇಟೆಯಲ್ಲಿ ನಡೆದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಕೊಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಸ್ಸಿಗೆ ಎರಡು ಟಯರ್‌ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

ರಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಧಾರ್ಮಿಕ ಆಚರಣೆಗಳ ಮೂಲಕ ದೇವರ ಸೇವೆಯೊಂದಿಗೆ ಜಾತಿ–ಧರ್ಮದ ಭೇದವಿಲ್ಲದೆ ಸಾಮಾಜಿಕ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಮೃದ್ಧ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ವತಿಯಿಂದ ಕೊಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಸ್ಸಿಗೆ ಎರಡು ಟಯರ್‌ಗಳನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ ಆರ್. ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷೆ ಎ. ಗೀತಾ ಪದ್ಮರಾಜ್ ಬಲ್ಲಾಳ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಸಿದ್ಧಕಟ್ಟೆ ಶಾರದೋತ್ಸವ ಸಮಿತಿ ಅಧ್ಯಕ್ಷ ನೋಣಯ ಶೆಟ್ಟಿಗಾರ್, ಉದ್ಯಮಿ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಪುಷ್ಪಲತಾ ಎಸ್.ಆರ್., ವಕೀಲರಾದ ಅಶ್ವನಿ ಕುಮಾರ್ ರೈ, ಶೈಲಜಾ ರಾಜೇಶ್, ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಮುಡ್ರಾಯಿ, ಪ್ರಮುಖರಾದ ಎ.ಗೋಪಿನಾಥ ರೈ, ಕೆ.ರಮೇಶ ನಾಯಕ್, ಅಶ್ವಿನಿ ಪ್ರಭು ರಾಯಿ, ಸುಧೀರ್ ಶೆಟ್ಟಿ ರಾಯಿ, ರಾಘವೇಂದ್ರ ಪೂಜಾರಿ, ಕೆ.ಪರಮೇಶ್ವರ ಪೂಜಾರಿ, ಮೋಹನ ಪೂಜಾರಿ, ಚಂದ್ರಶೇಖರ ಆಚಾರ್ಯ, ಸದಾನಂದ ಸೀತಾಳ, ಮೋಹನ ಗೌಡ ಕಲ್ಮಂಜ, ರಾಮಸುಂದರ ಗೌಡ, ನಾರಾಯಣ ಗೌಡ ಮೀಯಾಲು, ಸೋಮಶೇಖರ ರೈ, ಜಯಲಕ್ಷ್ಮಿ ರಾಯಿ ಸೇರಿದಂತೆ ಹಲವು ಗಣ್ಯರು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕೊಯಿಲ ಸ್ವಾಗತಿಸಿದರು. ಸಂಚಾಲಕ ಜಗದೀಶ ಕೊಯಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ವಂದಿಸಿದರು. ಕಲಾವಿದ ಪುರುಷೋತ್ತಮ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *