Breaking
9 Sep 2026, Wed

45 ವರ್ಷಗಳ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ಜಾರಪ್ಪ ಮೂಲ್ಯರಿಗೆ ಸನ್ಮಾನ

ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.), ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ 45 ವರ್ಷಗಳಿಗೂ ಹೆಚ್ಚು ಕಾಲ ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮಂಚಿಯ ಶ್ರೀ ಜಾರಪ್ಪ ಮೂಲ್ಯ ಕೆ. ಅವರನ್ನು ಸನ್ಮಾನಿಸಲಾಯಿತು.

ಯುವ ವೇದಿಕೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಸನ್ಮಾನಿತರ ಸ್ವಗೃಹಕ್ಕೆ ತೆರಳಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಹೆಚ್.ಕೆ. ನಯನಾಡು, ಸುಕುಮಾರ್ ಬಂಟ್ವಾಳ, ನಾರಾಯಣ ಹೊಸ್ಮಾರ್, ದುರ್ಗಾಶ್ರೀ ಪ್ರದೀಪ್, ಸಂತೋಷ್ ಮರ್ತಾಜೆ, ಪುರುಷೋತ್ತಮ ಹಾಲಾಡಿ, ಸೌಮ್ಯ ಸುಕುಮಾರ್, ಜೀವನ್ ಭಂಡಾರುಬೆಟ್ಟು, ಪುನೀತ್ ಕಾಮಾಜೆ, ನಿತೀಶ್ ಪಲ್ಲಿಕಂಡ, ಸಂತೋಷ್ ಮಯ್ಯರ ಬೈಲು ಸೇರಿದಂತೆ ಮಂಚಿ ಕುಲಾಲ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂಗ್ಲಿಷ್ ಅಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಜಾರಪ್ಪ ಮೂಲ್ಯ ಅವರು, ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಧ್ಯೇಯವಾಕ್ಯವಾದ ‘Love All, Serve All’ ಅನ್ನು ಉಲ್ಲೇಖಿಸಿ, ಯುವ ವೇದಿಕೆಯ ಪ್ರೀತಿಗೆ ತಾವು ಚಿರಋಣಿಯಾಗಿರುವುದಾಗಿ ಭಾವುಕರಾಗಿ ತಿಳಿಸಿ ಧನ್ಯವಾದ ಸಲ್ಲಿಸಿದರು.

ಸನ್ಮಾನಿತರ ಅಳಿಯ ಹಾಗೂ ಪ್ರಾಧ್ಯಾಪಕ ಡಾ. ಲೋಕೇಶ್ ನಾರ್ಶ ಸ್ವಾಗತಿಸಿದರು. ಶ್ರೀ ಶೇಷಪ್ಪ ಮಾಸ್ತರ್ ಪ್ರಸ್ತಾವನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸನ್ಮಾನಿತರ ಕುಟುಂಬದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *