Breaking
13 Aug 2026, Thu

ಮುಂಬೈನ 24 ವರ್ಷದ ಸಾಹಸಿ ಬೈಕರ್ ರಿದ್ಧಿ ಥಕ್ಕರ್ ದುರಂತ ಅಂತ್ಯ!

ಮುಂಬೈನಿಂದ ಛತ್ತೀಸ್ಗಢದ ಬಸ್ತಾರ್ಗೆ ಮಹಿಳಾ ಬೈಕರ್ಗಳ ತಂಡದೊಂದಿಗೆ ರೈಡ್ ತೆರಳಿದ್ದ 24 ವರ್ಷದ ಸಾಹಸಿ ಬೈಕರ್ ರಿದ್ಧಿ ಥಕ್ಕರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.


ಛತ್ತೀಸ್ಗಢದ ಧಮ್ತಾರಿ ಜಿಲ್ಲೆಯ ಮಾರ್ಕಟೋಲಾ ಘಾಟ್ ಸಮೀಪ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಆಗಸ್ಟ್ 12ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದೆ. ಜಗತ್ರಾ ಕಣಿವೆಯ ಅಪಾಯಕಾರಿ ತಿರುವಿನಲ್ಲಿ ವೇಗವಾಗಿ ಬಂದ ಅಪರಿಚಿತ ಟ್ರೈಲರ್ ಟ್ರಕ್ ರಿದ್ಧಿ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ.


ಮುಂಬೈನ ಬೋರಿವಲಿ ಪಶ್ಚಿಮದ ನಿವಾಸಿಯಾಗಿದ್ದ ರಿದ್ಧಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 23 ಮಹಿಳಾ ಬೈಕರ್ಗಳ ತಂಡದೊಂದಿಗೆ ರಾಯ್ಪುರದಿಂದ ಬಸ್ತಾರ್ಗೆ ಪ್ರಯಾಣಿಸುತ್ತಿದ್ದರು. ತಂಡದಲ್ಲಿ 20 ಬೈಕ್ಗಳು ಹಾಗೂ ಒಂದು ಕಾರು ಇದ್ದವು.


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಿದ್ಧಿ ಅವರನ್ನು ಸಹಯಾತ್ರಿಗಳು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.


ಅಪಘಾತದ ಬಳಿಕ ಟ್ರಕ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ದೂರದ ಬೈಕ್ ರೈಡ್ಗಳಲ್ಲಿ ಸಕ್ರಿಯರಾಗಿದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಾಹಸಯಾತ್ರೆಗಳನ್ನು ಹಂಚಿಕೊಳ್ಳುತ್ತಿದ್ದ ರಿದ್ಧಿ ಅವರ ಹಠಾತ್ ನಿಧನಕ್ಕೆ ಬೈಕಿಂಗ್ ಸಮುದಾಯ ಹಾಗೂ ಕುಟುಂಬಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *