ಬಂಟ್ವಾಳ: ನವೋದಯ ಮಿತ್ರ ಕಲಾವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಸೇವಾ ಭಾರತೀ ಬಂಟ್ವಾಳ ಹಾಗೂ ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಸೆ.27ರಂದು ನೆತ್ತರಕೆರೆ ವಸಂತಿ ವಿಠ್ಠಲ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.

ಭಾರತ ಮಾತೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ನವೋದಯ ಮಿತ್ರ ಕಲಾವೃಂದದ ಅಧ್ಯಕ್ಷ ಜಗದೀಶ ಎನ್., ಸೇವಾ ಭಾರತೀ ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ ಕುಮಾರ್, ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ್, ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸೋನಾಲಿ ಹಾಗೂ ಡಾ. ಸೇಲಿನಾ, ಗೌರವಾಧ್ಯಕ್ಷ ಪಿ. ಸುಬ್ರಮಣ್ಯ ರಾವ್, ಮಾಜಿ ಅಧ್ಯಕ್ಷ ಬಿ. ಸುರೇಶ ಭಂಡಾರಿ ಅರ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನವೋದಯ ಮಿತ್ರ ಕಲಾವೃಂದದ ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ಎನ್. ಹಾಗೂ ಕೋಶಾಧಿಕಾರಿ ರಂಜಿತ್ ಸಹಕರಿಸಿದರು. ಶಿಬಿರದಲ್ಲಿ ಸುಮಾರು 65 ಮಂದಿ ರಕ್ತದಾನ ಮಾಡಿದರು.



