Breaking
13 Jul 2026, Mon

ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿಯಿಂದ ಸಾಮೂಹಿಕ ವೇದಸೂಕ್ತ ಪಾರಾಯಣ ಭಕ್ತಿಭಾವದಿಂದ ಸಂಪನ್ನ

ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿ, ಬಂಟ್ವಾಳ ವತಿಯಿಂದ ಸಾಮೂಹಿಕ ರುದ್ರ, ನಮಕ, ಚಮಕ ಸೇರಿದಂತೆ ವಿವಿಧ ವೇದಸೂಕ್ತಗಳ ಪಾರಾಯಣ ಧಾರ್ಮಿಕ ಶ್ರದ್ಧಾಭಕ್ತಿಯಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಗಣಪತಿ ಸೂಕ್ತ, ವಿಷ್ಣು ಸೂಕ್ತ, ದೇವಿ ಸೂಕ್ತ, ರುದ್ರ ಸೂಕ್ತ, ಸೌರ ಸೂಕ್ತ, ಅಘಮರ್ಷಣ ಸೂಕ್ತ, ಪುರುಷ ಸೂಕ್ತ, ಪವಮಾನ ಸೂಕ್ತ, ಭಾಗ್ಯ ಸೂಕ್ತ, ಅಂಬೃಣಿ ಸೂಕ್ತ ಹಾಗೂ ಮಂತ್ರಪುಷ್ಪ ಸೇರಿದಂತೆ ಹಲವು ವೇದಸೂಕ್ತಗಳನ್ನು ಪಠಿಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ಅರ್ಚಕರಾದ ರಘುರಾಮ ಭಟ್ ಹಾಗೂ ರಾಘವೇಂದ್ರ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಚಾಲಕ ಎ. ರವಿಶಂಕರ ಮಯ್ಯ, ಅರ್ಬಿ ಕೃಷ್ಣಕುಮಾರ್ ಸೋಮಯಾಜಿ, ರವಿಶಂಕರ ಕಾರಂತ್, ಶಾಂತರಾಮ ಎಸ್.ಬಿ., ಎನ್. ರಾಮಚಂದ್ರ ಮಯ್ಯ, ಶ್ರೀನಿವಾಸ ಹೊಳ್ಳ, ಸೀತಾರಾಮ ಮಯ್ಯ, ಕೆ. ಮಿಥುನ ರಾವ್, ನಾರಾಯಣ ಮಯ್ಯ (ಭಂಡಾರಿಬೆಟ್ಟು), ಎ. ದನೇಶ್ವರ ರಾವ್, ಎಂ. ಜಯರಾಮ ಮಯ್ಯ ಸೇರಿದಂತೆ ಮೊದಲಾದವರು ಕಾರ್ಯಕ್ರದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕುಲಾಲ್ ಹಾಗೂ ದೇವಾಲಯದ ಪ್ರಬಂಧಕಿ ಹೇಮಲತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *