Breaking
13 Jul 2026, Mon

ಬಿರುವೆರ್ ಸೇವಾ ಟ್ರಸ್ಟ್ (ರಿ.) ನರಿಕೊಂಬು ವತಿಯಿಂದ ಬಿಲ್ಲವರ ಸೌಹಾರ್ದ ಕುಟುಂಬ ಮಿಲನ-2026: ಕೆಸರು ಗದ್ದೆ ಆಟೋಟ ಸ್ಪರ್ಧೆಗಳು

ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ (ರಿ.) ನರಿಕೊಂಬು, ವತಿಯಿಂದ ಜುಲೈ 19, ಆದಿತ್ಯವಾರದಂದು ನಾರಿಕೊಂಭೇಶ್ವರ ದೇವಸ್ಥಾನದ ರಾಯಸ ಗದ್ದೆಯಲ್ಲಿ ನರಿಕೊಂಬು ಶಂಭೂರು ವಲಯದ “ಬಿಲ್ಲವರ ಸೌಹರ್ದ ಕುಟುಂಬ ಮಿಲನ – 2026 ಹಾಗೂ ಕೆಸರು ಗದ್ದೆ ಆಟೋಟ ಸ್ಪರ್ಧೆಗಳು” ಅದ್ಧೂರಿಯಾಗಿ ನಡೆಯಲಿದೆ.


ಕಾರ್ಯಕ್ರಮದ ಅಂಗವಾಗಿ ವಿವಿಧ ರೀತಿಯ ಕೆಸರು ಗದ್ದೆ ಕ್ರೀಡೆಗಳು ಹಾಗೂ ಸಾಂಪ್ರದಾಯಿಕ ಗ್ರಾಮೀಣ ಸ್ಪರ್ಧೆಗಳು ಆಯೋಜಿಸಲಾಗಿದ್ದು, ಪುರುಷರಿಗೆ ವಾಲಿಬಾಲ್, ಕಬಡ್ಡಿ ಹಾಗೂ ಹಗ್ಗಜಗ್ಗಾಟ, ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ತ್ರೋಬಾಲ್, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಬಿಲ್ಲವ ಸಮಾಜದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ಮನವಿ ಮಾಡಿದೆ.


ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.


ಬಿರುವೆರ್ ಸೇವಾ ಟ್ರಸ್ಟ್ ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಂಘಟಕರು ಸಮಾಜದ ಎಲ್ಲಾ ಬಂಧುಗಳು, ಯುವಕರು, ಮಹಿಳೆಯರು ಹಾಗೂ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

Leave a Reply

Your email address will not be published. Required fields are marked *