Breaking
2 Sep 2026, Wed

ಅಮ್ಟೂರು ಕೆದ್ಲಾದಲ್ಲಿ ಸಾಮೂಹಿಕ ಶ್ರೀ ಶತರುದ್ರ ಪಾರಾಯಣ ಭಕ್ತಿಭಾವದಿಂದ ಸಂಪನ್ನ

ಬಂಟ್ವಾಳ: ಶ್ರೀ ರುದ್ರಪಠಣ ಸಮಿತಿ, ಬಂಟ್ವಾಳ ವತಿಯಿಂದ ತಿಂಗಳ ಕೃಷ್ಣಪಕ್ಷ ತ್ರಯೋದಶಿ ಪ್ರದೋಷ ಪುಣ್ಯಕಾಲದ ಅಂಗವಾಗಿ ಅಮ್ಟೂರು ಕೆದ್ಲಾದಶ್ರೀನಿವಾಸ ಹೊಳ್ಳ ಅವರ ಮನೆಯಲ್ಲಿ ಜುಲೈ 12ರ ಭಾನುವಾರ ಸಾಮೂಹಿಕ ಶ್ರೀ ಶತರುದ್ರ ಪಾರಾಯಣ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ಮಾರ್ಗದರ್ಶನದಲ್ಲಿ ವೇದಪಾರಾಯಣ ನಡೆಯಿತು.

ಈ ಸಂದರ್ಭದಲ್ಲಿ ಸಂಚಾಲಕ ಎ. ರವಿಶಂಕರ ಮಯ್ಯ, ಶಾಂತರಾಮ ರಾವ್ ಎಸ್.ಬಿ., ರಾಮಚಂದ್ರ ಮಯ್ಯ, ಅರ್ಬಿ ಕೃಷ್ಣಕುಮಾರ್ ಸೋಮಯಾಜಿ, ಎಂ. ಜಯರಾಮ ಮಯ್ಯ, ಕೆ. ಪರಮೇಶ್ವರ ರಾವ್, ಸೀತಾರಾಮ ಮಯ್ಯ, ಕೆ. ರಘುರಾಮ ರಾವ್, ಎನ್. ಶಾಂತಕುಮಾರ ಮಯ್ಯ, ಈ. ದನೇಶ್ವರ ರಾವ್, ರವಿಶಂಕರ ಕಾರಂತ, ನಾರಾಯಣ ಮಯ್ಯ (ಭಂಡಾರಿಬೆಟ್ಟು), ನವೀನ ರಾವ್, ಕೆ. ಮಿಥುನ ರಾವ್, ಸುಧಾಕರ ತುಂಗ, ಗಣೇಶ್ ಕಾರಂತ, ಕೆ. ರಮೇಶ್ ಹೊಳ್ಳ, ಎ.ಪಿ. ರಾವ್, ಹರೀಶ್ ರಾವ್, ಅಶ್ವಿನಿ ಭಟ್, ನವನೀತ್ ರಾವ್ ಸೇರಿದಂತೆ ಅನೇಕ ಭಕ್ತರು ಶ್ರೀ ಶತರುದ್ರ ಪಾರಾಯಣದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *