Breaking
11 Jul 2026, Sat

ಬಂಟ್ವಾಳ: ಹೋಮ್‌ಗಾರ್ಡ್ ಸದಸ್ಯ ದಯಾನಂದ ಕುಲಾಲ್ ನಿಧನ; ಗೃಹರಕ್ಷಕ ದಳದಿಂದ ಸಂತಾಪ

ಬಂಟ್ವಾಳ: ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಬಂಟ್ವಾಳ ಘಟಕದ ಸದಸ್ಯರಾದ ದಯಾನಂದ ಕುಲಾಲ್ ಕಾಮಜೆ ಅವರು ಜುಲೈ 10ರಂದು ಸಂಜೆ ನಿಧನರಾದರು.

ದಯಾನಂದ ಅವರು ಕ್ರಿಯಾಶೀಲತೆ, ಸರಳ-ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಕರ್ತವ್ಯದಲ್ಲಿ ಉತ್ತಮ ಮನೋಬಾವ ಎಲ್ಲರ ಪ್ರೀತಿಗೆ ಪಾತ್ರ ರಾಗಿದ್ದರು. ಗೃಹರಕ್ಷಕ ದಳದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಅವರು, ವಿಶೇಷವಾಗಿ ಬಂಟ್ವಾಳ ಪ್ರಾಕೃತಿಕ ವಿಪತ್ತು ನಿರ್ವಹಣಾ ತಂಡದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅವರು ಪತ್ನಿ, ಮಗಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ದಯಾನಂದ ಅವರ ಅಗಲಿಕೆಗೆ ಕರ್ನಾಟಕ ರಾಜ್ಯ ಗೃಹರಕ್ಷಕ ದಳದ ಬಂಟ್ವಾಳ ಘಟಕದ ಅಧಿಕಾರಿಗಳು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *