ವಿಟ್ಲ: ಸಮುದಾಯ ಆರೋಗ್ಯ ಕೇಂದ್ರದ ಬಳಿಯಿರುವ ಕುಲಾಲ ಸಂಘ (ರಿ.) ವಿಟ್ಲದ 26ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವ ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜದ ಕೊಡುಗೈ ದಾನಿ ಸಿ. ಎಸ್. ಆರ್ ಸಮೂಹ ಸಂಸ್ಥೆ ಬೆಂಗಳೂರು ಇದರ ಮಾಲಕ ಚಂದ್ರಹಾಸ ಅತಿಥಿಗಳಾಗಿ ಭಾಗವಹಿಸಿ ಉತ್ತಮ ಆರಂಭ ಯಶಸ್ಸಿನ ಭದ್ರ ಮೆಟ್ಟಿಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅವರ ಆರ್ಥಿಕ ಸಹಕಾರವನ್ನು ಗುರುತಿಸಿ ಗೌರವಿಸಲಾಯಿತು.ಸಂಘದ ಹಿರಿಯ ಮಾರ್ಗದರ್ಶಕ ಪೂವಪ್ಪ ಮೂಲ್ಯ ಬಾಳೆಕುಮೇರಿ ಸನ್ಮಾನ ಸ್ವೀಕರಿಸಿ, ನಾವು ಇತರರಿಗೆ ಅರ್ಥವಾದರೆ, ಬದುಕು ಸಹಜ ಮತ್ತು ಸುಂದರ. ಸಹಕಾರ ನಮ್ಮೆಲ್ಲರ ಮನಸ್ಸನ್ನು ಅರಳಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ ವಿಟ್ಲದ ಅಧ್ಯಕ್ಷ ಬಿ. ಕೆ ಬಾಬು ವಹಿಸಿದ್ದರು.
ಕುಲಾಲ ಸಂಘ ವಿಟ್ಲದ ಸ್ಥಾಪಕ ಅಧ್ಯಕ್ಷ ರಮಾನಾಥ ವಿಟ್ಲ, ಮಹಿಳಾ ಘಟಕದ ಅಧ್ಯಕ್ಷೆ ವಾರಿಜ ಬಾಬು ಮೂಲ್ಯ ಮಾರ್ನೆಮಿಗುಡ್ಡೆ ಉಪಸ್ಥಿರಿದ್ದರು.
ಸಮಾಜದ ಪ್ರತಿಭಾನ್ವಿತ ಕ್ರೀಡಾಪಟು, ರಾಜ್ಯಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ವಂದನ್ ಅವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಸಲುವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮೋಹಿನಿ ಎಣ್ಣೆದಕಲ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ವಸಂತ ಎರುಂಬು ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ರಮಾನಾಥ ವಿಟ್ಲ ಪ್ರಸ್ತಾವನೆ ಗೈದರು. ವೀರಪ್ಪ ಮೂಲ್ಯ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು. ಅರುಣಾಕರ ಪೆರುವಾಜೆ ಹಾಗೂ ಜಯಲಕ್ಷ್ಮಿಪುಚ್ಛೆಗುತ್ತು ವಿದ್ಯಾರ್ಥಿವೇತನ ಹಾಗೂ ಬಹುಮಾನದ ಪಟ್ಟಿಯನ್ನು ವಾಚಿಸಿದರು. ನಾರಾಯಣಮೂಲ್ಯ ಪೆತ್ತಮುಗೇರು ವಂದಿಸಿದರು .ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು.
ಸಮಾಜದ ಬಂಧುಗಳು ಭಜನಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದರು.ಸುರೇಶ್ ಕಲಾರಸಿಕ ವಿಟ್ಲ ನಿರ್ದೇಶನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.

