Breaking
28 Jul 2025, Mon

ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇದರ ಶಾಲಾ ವಾರ್ಷಿಕೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕಿನ ಧಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಜನವರಿ 4 ಶನಿವಾರ ನಡೆಯಲಿದೆ.

ಬೆಳಿಗ್ಗೆ ಗಂಟೆ 9ಕ್ಕೆ ಸರಿಯಾಗಿ ಬಂಟ್ವಾಳ ಸಂಚಾರಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಕೆ ಪಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ ಎ, ಗ್ರಾಮ ಲೆಕ್ಕಿಗರಾದ ಅಥಿಕ್ ಪೂಜಾರಿ, ಶಿಕ್ಷಣ ಸಂಯೋಜಕಿ ಪ್ರತಿಮಾ, ಬಂಟ್ವಾಳ ಬಿ ಆರ್ ಸಿ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ ಎಂ ಎನ್, ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಪ್ರಸಾದ್ ರೈ, ಬಾಲ್ತಿಲ ಕ್ಲಸ್ಟರ್ ಸಿ ಆರ್ ಪಿ ಸತೀಶ್ ರಾವ್, ಚಿನ್ನರ ಲೋಕ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ, ಬಿಸಿ ರೋಡ್ ರಾಜಲಕ್ಷ್ಮಿ ಟೆಕ್ಸ್ಟೈಲ್ ಮಾಲಕ ರಾಜೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಮಮತಾ ಸಂತೋಷ್, ಮೆನೇಜಸ್ ವುಡ್ ವರ್ಕ್ಸ್ ನರಿ ಕೊಂಬು ಮಾಲಕ ಅಲ್ಬರ್ಟ್ ಮಿನೇಜೆಸ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಂಟ್ವಾಳ ಅಧ್ಯಕ್ಷ ಜಯರಾಮ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ಕಾರ್ಯದರ್ಶಿ ಸಂತೋಷ್ ಕುಮಾರ್, ಪಿಡಬ್ಲ್ಯೂ ಕಂಟ್ರಾಕ್ಟರ್ ಪಿ ಎಸ್ ಅಬ್ದುಲ್ ಲತೀಫ್, ಶಂಬೂರ್ ಶಾಲಾ ನಿವೃತ್ತ ಶಿಕ್ಷಕ ಶಂಕರ್ ನಾರಾಯಣ ರಾವ್, ವಿಜಯಲಕ್ಷ್ಮಿ ಯುವಕ ಸಂಘ ನರಿಕೊಂಬು ಅಧ್ಯಕ್ಷ ಹರೀಶ್ ಟೈಲರ್, ನರಿಕೊಂಬು ಯುವಕ ಮಂಡಲ ಅಧ್ಯಕ್ಷ ಮೋಹನ್ ಕುಲಾಲ್, ವೀರಮಾರುತಿ ವ್ಯಾಯಾಮ ಶಾಲೆ ಮಾರುತಿ ನಗರ ಅಧ್ಯಕ್ಷ ಹರೀಶ್ ಮೊದಲಾದವರು ಉಪಸ್ಥಿತಲಿರುವರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ತಾಳಬದ್ಧ ವ್ಯಾಯಾಮಗಳು ಮತ್ತು ಅಮೋಘ ದೈಹಿಕ ಕಸರತ್ತುಗಳು ನೆರವೇರಲಿರುವುದು. ಸಂಜೆ ಗಂಟೆ 4:30 ರಿಂದ ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್( ರಿ.) ಮಂಗಳೂರು ಇದರ ಯಕ್ಷದ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮದಡಿ ಶಿಕ್ಷಕರಾದ ಓಂ ಪ್ರಕಾಶ್ ಇವರ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳಿಂದ ” ಶಶಿ ಪ್ರಭಾ ಪರಿಣಯ ” ಯಕ್ಷಗಾನ ಪ್ರಸಂಗ ಜರಗಲಿರುವುದು.

ಸಂಜೆ ಗಂಟೆ 6:30 ರಿಂದ ಸಭಾ ಕಾರ್ಯಕ್ರಮ ಜರಗಳಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ಯು ವಹಿಸಲಿದ್ದು. ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಬ್ರಿಜೇಶ್ ಚೌಟರವರ ಗೌರವ ಉಪಸ್ಥಿತಿಯಲ್ಲಿ,ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭಾ ಬೂಡಾ ಅಧ್ಯಕ್ಷರಾದ ಬೇಬಿ ಕುಂದರ್, ನರಿಕೊಂಬು ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ವಿನೀತಾ ಪುರುಷೋತ್ತಮ್, ಪಂಚಾಯತ್ ಸದಸ್ಯರುಗಳಾದ ರಂಜಿತ್ ಕೆದ್ದೇಲ್, ಚಿತ್ರಾವತಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ, ಮಾಚಿ ಗ್ರಾಮಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಮಾಜಿ ಜಿಲ್ಲಾ ರೋಟರಿ ಗವರ್ನರ್ ಪ್ರಕಾಶ್ ಕಾರಂತ್, ನಾಲ್ಕೈತ್ತಾಯ ಪಂಜುರ್ಲಿ ಸೇವಾ ಸಮಿತಿ ನರಿಕೊಂಬು ಅಧ್ಯಕ್ಷ ಜಗನ್ನಾಥ್ ಬಂಗೇರ ನಿರ್ಮಾಲ್, ಅಗ್ರಜ ಬಿಲ್ಡರ್ಸ್ ಮಂಗಳೂರು ಮಾಲಕರಾದ ಸಂದೇಶ್ ಶೆಟ್ಟಿ, ಶಂಬೂರ್ ಮುರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ಮೊಗರ್ನಾಡು ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಜನಾರ್ದನ ಭಟ್, ಪದ್ಮಶ್ರೀ ಎಲೆಕ್ಟ್ರಿಕಲ್ ಮಾಲಕರಾದ ಪದ್ಮನಾಭ ಮಯ್ಯ, ಸ್ಥಳದಾನಿಗಳಾದ ಶ್ರೀಶ ರಾಯಸ, ಪ್ರಸಾದ್ ಗಾಣಿಗ ಕರ್ಬೇಟ್ಟು, ಉದ್ಯಮಿ ಮೊಹಮದ್ ಇಲಿಯಾಸ್, ಬಿರುವೆರು ಸೇವಾ ಟ್ರಸ್ಟ್ ಅಧ್ಯಕ್ಷ ಸೀತಾರಾಮ್ ಪೂಜಾರಿ, ಉದ್ಯಮಿ ಕೆಲ್ವಿನ್ ಮಿನಿಜಸ್, ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ನರಸಿಂಹ ಪೈ, ಯಕ್ಷದ್ರುವ ಯಕ್ಷ ಶಿಕ್ಷಣ ಪ್ರ ಸಂಚಾಲಕ ವಾಸುದೇವ ಐತಾಳ್, ಉದ್ಯಮಿ ಕಿರಣ್ ಅಟ್ಲೂರು ಮೊದಲಾದವರು ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪುರಸ್ಕೃತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶೋಭಾ, ಸಾಧಕ ಹಿರಿಯ ವಿದ್ಯಾರ್ಥಿಗಳಾದ ಅನಂತೇಶ್ ಎಲ್, ದೀಕ್ಷಿತಾ ಬೋರುಗುಡ್ಡೆ, ಕವನ ಪೈ, ಇವರುಗಳನ್ನು ಸನ್ಮಾನಿಸಲಾಗುವುದುಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ಕಲರವ “ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು ಎಂದು ನರಿಕೊಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಹಾಗೂ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಎ ಎಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *