ರಾಯಿ: ಶ್ರೀ ನಾಗಬ್ರಹ್ಮ ಸುಬ್ರಹ್ಮಣೇಶ್ವರ ಭಜನಾ ಮಂಡಳಿ (ಲ.) ಬದನಡಿ, ರಾಯಿ ಇದರ ನೇತೃತ್ವದಲ್ಲಿ ದಿನಾಂಕ 28-12-2024ನೇ ಶನಿವಾರದಂದು ಶ್ರೀ ಕ್ಷೇತ್ರ ಬದಿನಡಿಯಲ್ಲಿ ದೊಡ್ಡ ಕಾರ್ತಿಕ ಪೂಜೆ ಹಾಗೂ ಶನಿವಾರ ಬೆಳಿಗ್ಗೆ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ 16ನೇ ವರ್ಷದ ಭಜನಾ ಮಂಗಲೋತ್ಸವವು ಜರುಗಿತು.
ಆ ಪ್ರಯುಕ್ತ ನೂರಾರು ಭಕ್ತರು, ವಿವಿಧ ಭಜನಾ ಮಂಡಳಿಗಳು ಉಪಸ್ಥಿತರಿದ್ದ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ಅನುವಂಶಿಕ ಮೊಕ್ತೇಸರರು, ಪ್ರಧಾನ ಅರ್ಚಕರು, ಗ್ರಾಮ ಆಡಳಿತಾಧಿಕಾರಿ ಮಹಿಳಾ ಸಮಿತಿಪದಾಧಿಕಾರಿಗಳು ಭಜನಾ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

