Breaking
23 Sep 2026, Wed

ಮಹತೋಬಾರ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಪಠಣ

ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿ ವತಿಯಿಂದ ಅದ್ಯಪಾಡಿ ಕ್ಷೇತ್ರದ ಮಹತೋಬಾರ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಭಕ್ತಿ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.

ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಶ್ರೀ ರುದ್ರ, ಚಮಕ-ನಮಕ, ಗಣಪತಿ ಸೂಕ್ತ, ಭಾಗ್ಯ ಸೂಕ್ತ, ಸೌರ ಸೂಕ್ತ, ಶ್ರೀ ದೇವಿ ಸೂಕ್ತ, ಆಘಮರ್ಷಣ ಸೂಕ್ತ, ಪುರುಷ ಸೂಕ್ತ, ಮಂತ್ರ ಪುಷ್ಪ ಹಾಗೂ ರುದ್ರ ಸೂಕ್ತಗಳ ಪಠಣ ನಡೆಯಿತು.

ಕಾರ್ಯಕ್ರಮದಲ್ಲಿ ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಅರ್ಚಕ ಮಹೇಶ್ ಕೇಕುಣಾಯ, ಎ. ರವಿಶಂಕರ ಮೈಯ್ಯ, ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಉಜಿರೆ ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ರವಿಶಂಕರ್ ಕಾರಂತ, ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀನಿವಾಸ ಹೊಳ್ಳ, ಎ. ಕೃಷ್ಣಕುಮಾರ ಸೋಮಯಾಜಿ, ಎಂ. ಶಾಂತರಾಮ ರಾವ್, ಎಂ. ಜಯರಾಮ ಮೈಯ್ಯ, ಚಂದ್ರಮೋಹನ ರಾವ್, ರಾಮಚಂದ್ರ ಮೈಯ್ಯ, ಕೆ. ರಾಜಾರಾಮ ಐತಾಳ, ಹರೀಶ್ ಭಟ್ ಸೇರಿದಂತೆ ಮೊದಲಾದವರು ವೇದ ಸೂಕ್ತ ಪಠಣ ದಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *