Breaking
22 Jun 2026, Mon

ಹುಟ್ಟುಹಬ್ಬದ ಅಂಗವಾಗಿ ವೃದ್ಧಾಶ್ರಮದ ತಾಯಂದಿರಿಗೆ ದಿನಸಿ ವಿತರಣೆ

ಮೈಸೂರು: PGRSS ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ಮೈಸೂರಿನ ದೇವೇಂದ್ರ ಅವರ ಸ್ನೇಹಿತರಾದ ದಿನೇಶ್ ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಆಶ್ರಮದ ತಾಯಂದಿರಿಗೆ ದಿನಸಿ ಪದಾರ್ಥಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಅವರು, “ತಾಯಂದಿರ ರಕ್ಷಣೆ ಮತ್ತು ಆರೈಕೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದಿನ ಸಮಾಜದಲ್ಲಿ ಅನೇಕ ವೃದ್ಧ ತಾಯಂದಿರನ್ನು ಮಕ್ಕಳು ನಿರ್ಲಕ್ಷಿಸುತ್ತಿರುವುದು ವಿಷಾದನೀಯ. ಪ್ರತಿಯೊಬ್ಬ ಮಗುವೂ ತಮ್ಮ ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಪವನ್ ಅವರು ಮಾತನಾಡಿ, “ವೃದ್ಧಾಶ್ರಮದ ನಿವಾಸಿಗಳಿಗಾಗಿ ಒಂದು ವರ್ಷದ ಅವಧಿಗೆ ಪ್ರತಿದಿನ ಹಾಲು ಹಾಗೂ ಮೊಸರಿನ ವ್ಯವಸ್ಥೆಯನ್ನು ವೈಯಕ್ತಿಕವಾಗಿ ಮಾಡುವುದಾಗಿ” ಘೋಷಿಸಿದರು.

ಕಾರ್ಯಕ್ರಮದಲ್ಲಿ ದೇವೇಂದ್ರ, ದಿನೇಶ್, ಸಮಿತಿ ಅಧ್ಯಕ್ಷ ಪವನ್, PGRSS ಅಧ್ಯಕ್ಷ ಯಾದವ್ ಹರೀಶ್, PGRSS ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ರಕ್ತದಾನಿ ಮಂಜು, ಕಾನಾರಾಮ್, ವಿಕಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *