Breaking
21 Sep 2026, Mon

ಬೆಳ್ತಂಗಡಿ ವಕೀಲರ ಸಂಘದಿಂದ ಹೈಕೋರ್ಟ್ ರಿಜಿಸ್ಟ್ರಾರ್ ಭೇಟಿ

ಬೆಳ್ತಂಗಡಿ: ಬಹುನಿರೀಕ್ಷಿತ ನೂತನ ನ್ಯಾಯಾಲಯ ಸಂಕೀರ್ಣದ ಕಾಮಗಾರಿಗೆ ಜೂನ್ 14ರಂದು ಶಂಕುಸ್ಥಾಪನೆ ನಡೆಯಲಿದ್ದು, ಅದರ ಪೂರ್ವಸಿದ್ಧತೆಗಳ ಹಿನ್ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ನಿಯೋಗವು ಹೈಕೋರ್ಟ್ ಮೂಲಸೌಕರ್ಯ ವಿಭಾಗದ ರಿಜಿಸ್ಟ್ರಾರ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ ಅವರ ನೇತೃತ್ವದಲ್ಲಿ ನಿಯೋಗವು ಹೈಕೋರ್ಟ್ ಮೂಲಸೌಕರ್ಯ ವಿಭಾಗದ ರಿಜಿಸ್ಟ್ರಾರ್ ಹೆಚ್.ಆರ್. ರಾಧಾ ಅವರನ್ನು ಭೇಟಿ ಮಾಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಉಪಾಧ್ಯಕ್ಷ ಹಾಗೂ ಕಟ್ಟಡ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಕಟ್ಟಡ ಸಮಿತಿ ಸದಸ್ಯ ಹಾಗೂ ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್ ಎ., ಮತ್ತು ಕಟ್ಟಡ ಸಮಿತಿ ಸದಸ್ಯ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *