Breaking
2 Jun 2026, Tue

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ದುರಸ್ತಿ ಶ್ರಮದಾನ

ಕಾಡಬೆಟ್ಟು : ಬಂಟ್ವಾಳ ತಾಲೂಕು ಚೆನ್ನೈ ತೋಡಿ ಗ್ರಾಮದ ವಾಮದಪದವು ಮಂಜುಳಾ ರವರ ಮನೆಯ ಮೇಲ್ಚಾವಣಿ ದುರಸ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಇದರ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ವಾಮದಪದವು ಶೌರ್ಯ ಘಟಕ ಮತ್ತು ಧನು ಪೂಜೆ ಶೌರ್ಯ ಘಟಕ ಸದಸ್ಯರ ಸಹಕಾರದೊಂದಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಸನ ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಭೇಟಿ ನೀಡಿ ಶ್ರಮದಾನಕ್ಕೆ ಪ್ರೋತ್ಸಾಹಿಸಿದರು.

ಇದು ಈ ವರ್ಷದಲ್ಲಿ ಕಾಡಬೆಟ್ಟು ವಗ್ಗ ಶೌರ್ಯ ಘಟಕದ 7ನೇ ಮನೆ ದುರಸ್ತಿಯ ಶ್ರಮದಾನ ವಾಗಿದ್ದು ಮಂಜುಳಾ ರವರು ತೀರಾ ಬಡತನದಿಂದ ಇದ್ದು ಮನೆಯಲ್ಲಿ ಅವರು ಮತ್ತು ಅವರ ಅಂಗವಿಕಲೆ ಅಕ್ಕ ವಾಸಿಸುತ್ತಿದ್ದು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಶಾಸನವನ್ನು ಪಡೆಯುತಿದ್ದಾರೆ.

ಮನೆಯ ಮೇಲ್ಚಾವಣಿ ದುರಸ್ತಿಗೆ ಬೇಕಾದ ಸಲಕರಣೆಗಳನ್ನು ಹಾಗೂ ಉಪಹಾರದ ವ್ಯವಸ್ಥೆಯನ್ನು ವಾಮದಪದವು ಮಹಾಲಕ್ಷ್ಮಿ ಹಾರ್ಡ್ವೇರ್ ಮಾಲೀಕರಾದ ಅನಂತ ಪೈ ನೀಡಿ ಸಹಕರಿಸಿದರು.

ಶ್ರಮದಾನ ಕಾರ್ಯದಲ್ಲಿ ಕಾಡಬೆಟ್ಟು ಶೌರ್ಯ ಘಟಕದ ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರಾದ ಸಂಪತ್ ಶೆಟ್ಟಿ, ಅಶೋಕ ಬೊಲ್ಮಾರ್, ಶಶಿಕಲಾ, ನಾರಾಯಣ್ ಪೂಜಾರಿ,ರಮೇಶ್, ವಿನೋದ್, ಮಹಾಬಲ ರೈ, ನಾರಾಯಣಶೆಟ್ಟಿ, ಮೋಹನಂದ,ರೋಹಿತ್, ಜನಾರ್ದನ, ಹಾಗೂ ವಾಮದಪದವು ಶೌರ್ಯ ಘಟಕ ಪ್ರತಿನಿಧಿ ಪ್ರಕಾಶ್, ರವೀಂದ್ರ ರೈ, ಗಿರೀಶ್ ನಾಯಕ್, ಧನು ಪೂಜೆ ಘಟಕದ ಪ್ರಮೋದ್ ಆಚಾರ್ಯ, ಭಾಗವಹಿಸಿದ್ದರು

Leave a Reply

Your email address will not be published. Required fields are marked *