ಬಂಟ್ವಾಳ: ರುದ್ರಪಠಣ ಸಮಿತಿ ಬಂಟ್ವಾಳ ಇವರ ವತಿಯಿಂದ ಶ್ರೀ ಸಾಂಬಸದಾಶಿವ ದೇವಸ್ಥಾನ, ಬಾರ್ದಿಲ ಕಿಲೆಂಜಾರು ಕುಪ್ಪೆಪದವು ಕ್ಷೇತ್ರದಲ್ಲಿ ಸಾಮೂಹಿಕ ರುದ್ರಪಠಣ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ರುದ್ರ ನಮಕ–ಚಮಕ, ಅಥರ್ವಶೀರ್ಷ ಸೂಕ್ತ, ಗಣಪತಿ ಸೂಕ್ತ, ಭಾಗ್ಯ ಸೂಕ್ತ, ದೇವೀ ಸೂಕ್ತ, ಸೌರ ಸೂಕ್ತ, ಮನ್ಯು ಸೂಕ್ತ, ಆಗಮರ್ಷಣ ಸೂಕ್ತ ಹಾಗೂ ಮಂತ್ರಪುಷ್ಪಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.

ಕಾರ್ಯಕ್ರಮದಲ್ಲಿ ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಎ. ರವಿಶಂಕರ ಮೈಯ್ಯ, ಕೂಟ ಮಹಾಜಗತ್ತು ಪೊಳಲಿ ಅಂಗಸಂಸ್ಥೆಯ ಅಧ್ಯಕ್ಷ ವಿನಾಯಕ ಕಾರಂತ, ಅರ್ಚಕ ರಾಘವೇಂದ್ರ ಕಾರಂತ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮೈಯ್ಯ, ಕೆ. ರಾಜಾರಾಮ ಮೈಯ್ಯ, ಕೃಷ್ಣ ಸೋಮಯಾಜಿ ಅರ್ಬಿ, ಶಾಂತರಾಮ ಮೈಯ್ಯ, ಚಂದ್ರಮೋಹನ ರಾವ್, ರಾಮಚಂದ್ರ ಮೈಯ್ಯ, ಶ್ರವಣಕುಮಾರ, ಎ. ದನೇಶ್ವರ ರಾವ್, ಶ್ರೀನಿವಾಸ ಹೊಳ್ಳ ಕೆ., ವಿಶಾಲ ಹೆಗ್ಡೆ ಹಾಗೂ ದೇವಾಲಯದ ಆಡಳಿತ ಸಮಿತಿಯ ಕೋಶಾಧಿಕಾರಿ ತಿಮ್ಮಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.



