Breaking
2 Sep 2026, Wed

ಮಗನ ಹುಟ್ಟುಹಬ್ಬದ ಅಂಗವಾಗಿ 250 ಮಂದಿಗೆ ಅನ್ನದಾನ; ಶಿಕ್ಷಣ ಸಹಾಯಕ್ಕೂ ಕೈಜೋಡಿಸಿದ ಅರ್ಚನ ಅರುಣ್ ಮಲ್ಯ

ಮಂಗಳೂರು: ಸಮಾಜಸೇವೆಯ ಮೂಲಕ ಮಾದರಿಯಾಗಿರುವ ಶ್ರೀಮತಿ ಅರ್ಚನ ಅರುಣ್ ಮಲ್ಯ ಅವರು ತಮ್ಮ ಮಗನ ಹುಟ್ಟುಹಬ್ಬದ ಪ್ರಯುಕ್ತ ಮೇ 31, 2026ರಂದು ಪ್ರಗತಿ ಚಾರಿಟೇಬಲ್ ಟ್ರಸ್ಟ್ ಮೂಲಕ 250 ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಿದರು.

ಅನ್ನದಾನ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದ್ದು, ಇದರ ಮೂಲಕ ಅಗತ್ಯವಿರುವ ಅನೇಕ ಜನರಿಗೆ ಆಹಾರ ವಿತರಣೆ ಮಾಡಲಾಯಿತು. ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಅರ್ಚನ ಅರುಣ್ ಮಲ್ಯ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದಲ್ಲದೆ, ತಮ್ಮ ಪುತ್ರಿ ಆರ್ಯ ಅರುಣ್ ಮಲ್ಯ ಅವರ ಸ್ಮರಣಾರ್ಥವಾಗಿ ಪ್ರತಿ ತಿಂಗಳು ಸರ್ಕಾರಿ ಶಾಲೆಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಅವರು ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಈ ನೆರವು ಅನೇಕ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತಿದೆ.

Leave a Reply

Your email address will not be published. Required fields are marked *