ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ವೀರಕಂಭ ಒಕ್ಕೂಟದ ತ್ರೈಮಾಸಿಕ ಸಭೆಯು ಮೇ 24ನೇ ರವಿವಾರ ವೀರಕಂಭ ಮಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ವೀರಕಂಭ ಒಕ್ಕೂಟದ ಅಧ್ಯಕ್ಷತೆಯನ್ನು ಶಾಂಭವಿ ಆಚಾರ್ಯ ಅವರು ವಹಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕರಾಜ್ ಅವರು ಯೋಜನೆಯ ಗುಂಪುಗಳ ಕಾರ್ಯ, ಜವಾಬ್ದಾರಿ, ಗುಂಪುಗಳಿಗೆ ನೀಡಲಾಗುವ ಸಾಲ ಸೌಲಭ್ಯಗಳು, ಆರೋಗ್ಯ ವಿಮೆ ಹಾಗೂ ಪ್ರಸಕ್ತ ಸಾಲಿನಲ್ಲಿ ವೀರಕಂಭ ಒಕ್ಕೂಟ ವ್ಯಾಪ್ತಿಯಲ್ಲಿ ಯೋಜನೆಯಿಂದ ದೊರೆತ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಕೂಡ ಮಾಡಲಾಯಿತು. ವೇದಿಕೆಯಲ್ಲಿ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಚಿನ್ನಾ ಮೈರಾ, ವೀರಕಂಭ ಒಕ್ಕೂಟ ಕಾರ್ಯದರ್ಶಿ ಆನಂದ ಮಜಿ, ಉಪಸಮಿತಿಯ ಸದಸ್ಯೆ ವೇದಾವತಿ ಹಾಗೂ ಕೆಲಿಂಜ ಒಕ್ಕೂಟ ಸೇವಾ ಪ್ರತಿನಿಧಿ ರೇವತಿ ಉಪಸ್ಥಿತರಿದ್ದರು.

ಒಕ್ಕೂಟ ಸಭೆಯ ಜವಾಬ್ದಾರಿಯನ್ನು ಗುಂಪಿನ ಸದಸ್ಯ ಯೋಗೀಶ್ ಮಜಿ ಸ್ವಾಗತಿಸಿ, ಸುನಿಲ್ ನಾಯ್ಕ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಒಕ್ಕೂಟ ಸೇವಾ ಪ್ರತಿನಿಧಿ ವಿಜಯ ನಿರೂಪಿಸಿದರು.


