Breaking
3 Sep 2026, Thu

ಶತಾಯುಷಿ ರಾಜಮ್ಮ ನಿಧನ

ಬಂಟ್ವಾಳ: ಇಲ್ಲಿನ ಕೊಯಿಲ ಕ್ವಾರ್ಟರ್ಸ್ ನಿವಾಸಿ, ದಿವಂಗತ ಗೋವಿಂದ ಸ್ವಾಮಿ ಅವರ ಪತ್ನಿ ರಾಜಮ್ಮ (103) ಅವರು ಅಸೌಖ್ಯದಿಂದ ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಕಳೆದ ಸುಮಾರು 70 ವರ್ಷಗಳ ಹಿಂದೆ ಕಲ್ಲು ಕಡಿಯುವ ವೃತ್ತಿಗೆ ಸಂಬಂಧಿಸಿ ಕೊಯಿಲಕ್ಕೆ ಬಂದು ನೆಲೆಸಿದ್ದ ರಾಜಮ್ಮ ಅವರು ಸ್ಥಳೀಯರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು.

ಶತಾಯುಷಿಯಾಗಿ ಕುಟುಂಬ ಹಾಗೂ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಅವರು ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11.45ಕ್ಕೆ ಕೈತ್ರೋಡಿ ಸ್ಮಶಾನದಲ್ಲಿ ನೆರವೇರಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ

Leave a Reply

Your email address will not be published. Required fields are marked *