Breaking
3 Sep 2026, Thu

ಸಜೀಪ ಮೂಡದಲ್ಲಿ ವಾಸುಕಿ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ

ಬಂಟ್ವಾಳ: ಸಜೀಪ ಮೂಡ ಗ್ರಾಮದ ಆಗರಿ ಮಾಡ ಆಲಾಡಿ ಖಾನ ಸಮೀಪ ನೂತನವಾಗಿ ನಿರ್ಮಾಣಗೊಂಡ ವಾಸುಕಿ ನಾಗದೇವರ ಸನ್ನಿಧಿಯಲ್ಲಿ ಶುಕ್ರವಾರ ಷಷ್ಟಿ ಹಾಗೂ ಆಶ್ಲೇಷ ನಕ್ಷತ್ರದ ಪರ್ವಕಾಲದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಶ್ರೀ ಆಶ್ಲೇಷ ಬಲಿ ಪೂಜೆ, ನವಕಲಶಾಭಿಷೇಕ, ಫಲಪಂಚಾಮೃತ ಅಭಿಷೇಕ, ನಾಗತಂಬಿಲ, ಪ್ರಸನ್ನ ಪೂಜೆ ಹಾಗೂ ಕಲ್ಪೋಕ್ತ ಪೂಜೆಗಳು ನೆರವೇರಿತು.

Leave a Reply

Your email address will not be published. Required fields are marked *