ಬಂಟ್ವಾಳ: ಅಮೇರಿಕಾ ಮತ್ತು ಇರಾನ್ ಹಾಗೂ ಇಸ್ರೇಲ್ ದೇಶಗಳ ನಡುವಿನ ಯುದ್ದದ ಪರಿಣಾಮದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಗಗನಕ್ಕೆ ಏರಿಕೆಯಾಗಿದ್ದು ಪ್ರಪಂಚದಾದ್ಯಂತ ತೈಲದ ಅಭಾವವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬಹುತೇಕ ದೇಶಗಳಲ್ಲಿ ತೈಲ ಬಿಕ್ಕಟ್ಟು ಈಗಾಗಲೇ ಕಾಡತೊಡಗಿದೆ.

ತೈಲ ಉತ್ಪಾದನೆಯೇ ಇಲ್ಲದಿರುವ ನಮ್ಮ ದೇಶದಲ್ಲಿ ಮುಂದೆ ತಲೆದೋರಬಹುದಾದ ತೈಲ ಸಮಸ್ಯೆ ಬಿಕ್ಕಟ್ಟಿನಿಂದ ಪಾರಾಗಲು ರಾಷ್ಟ್ರದ 140 ಕೋಟಿ ಜನತೆಯ ಹಿತದೃಷ್ಟಿಯಿಂದ ಮತ್ತು ಒಟ್ಟು ನಾಗರಿಕ ಸಮಾಜದ ಜನ ಜೀವನದ ಅನುಕೂಲತೆಗಾಗಿ ಪ್ರಧಾನಿ ನರೇಂದ್ರ ಮೋದಿಜಿಯವರು ದೇಶದ ಸಮಸ್ತ ಜನರಿಗೆ ತೈಲ ಮಿತ ಬಳಕೆಯ ಬಗ್ಗೆ ನೀಡಿದ ಕರೆಯೋಲೆಯಂತೆ ನಾವೆಲ್ಲರೂ ನಮ್ಮ ನಮ್ಮ ಸ್ವಂತ ವಾಹನಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡುವ ಮೂಲಕ ಅಗತ್ಯದ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಬಸ್ಸು ಮತ್ತು ರೈಲ್ವೆ ಸೇವೆಯನ್ನು ಬಳಸಿಕೊಂಡು ರಾಷ್ಟ್ರಕ್ಕಾಗಿ ಅಳಿಲು ಸೇವೆಯನ್ನು ಸಲ್ಲಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಪತ್ರಿಕಾ ಪ್ರಕಟಣೆ ಮೂಲಕ ಅಭಿಪ್ರಾಯ ಪ್ರಕಟಿಸಿದ್ದಾರೆ.

ಪ್ರಧಾನಿ ಮೋದಿಯವರು ತೈಲ ಮಿತ ಬಳಕೆ ಹಾಗೂ ಚಿನ್ನ ಖರೀದಿ ಕಡಿಮೆ ಮಾಡುವ ಬಗ್ಗೆ ದೇಶದ ಜನರಲ್ಲಿ ಬೇಡಿಕೊಂಡ್ಡದ್ದೇ ವಿನಾ ಯಾವುದೇ ಒತ್ತಾಯ, ಒತ್ತಡ ಮಾಡಿರುವುದಿಲ್ಲ. ಪ್ರಧಾನಿ ಕರೆಯಂತೆ ಈಗಾಗಲೇ ದೇಶದಾದ್ಯಂತ ಹಲವು ಮಂದಿ ಉನ್ನತ ಮಟ್ಟದ ನಾಯಕರಿಂದ ಹಿಡಿದು ವಿವಿಧ ದೇಶ ಭಕ್ತ ಅಧಿಕಾರಿಗಳು ತೈಲ ಅಭಾವವನ್ನು ತಗ್ಗಿಸುವ ಸಲುವಾಗಿ ತಮ್ಮ ಸರಕಾರಿ ವಾಹನಗಳಿಗೆ ವಿಶ್ರಾಂತಿ ಕೊಟ್ಟು ಮಹಾನ್ ತ್ಯಾಗಕ್ಕೆ ಇಳಿದಿರಿವುದು ರಾಷ್ಟ್ರ ಮತ್ತು ಪ್ರಧಾನಿ ಮೇಲೆ ಇರುವ ಅಭಿಮಾನವೇ ಇದಕ್ಕೆ ಸಾಕ್ಷಿಯಾಗಿದೆ.

ಈ ಹಿಂದೆ ಹಲವಾರು ಬಾರಿ ರಾಜ್ಯ ಸರಕಾರಗಳು, ಕೆಲವು ಸಂಘ, ಸಂಸ್ಥೆಗಳು ನಮ್ಮಲ್ಲೇ ದೊರೆಯುವ ನೀರು ಮತ್ತು ವಿದ್ಯುತ್ ಅಭಾವ ತಪ್ಪಿಸುವ ಸಲುವಾಗಿ ಮಿತ ಬಳಕೆಯ ಬಗ್ಗೆ ಪ್ರಕಟಣೆ ಹೊರಡಿಸಿದ್ದು ನಮ್ಮೆಲ್ಲರ ಕಣ್ಣ ಮುಂದೆ ಇದ್ದು ಮುಂದಿನ ದಿನಗಳಲ್ಲಿ ತುಳುನಾಡ ಜಿಲ್ಲೆಯ ಮೋದಿಯವರ ಈ ರಾಷ್ಟ್ರ ಹಿತದ, ಜನಹಿತದ ಕೋರಿಕೆಯನ್ನು ಪಾಲಿಸೋಣ ಎಂದೂ ವೈಯಕ್ತಿಕವಾಗಿ ಅಭಿಪ್ರಾಯ ಮೂಲಕ ವಿನಂತಿಸಿದ್ದಾರೆ.




