Breaking
15 May 2026, Fri

ಬಂಟ್ವಾಳದಲ್ಲಿ ಸಾಮೂಹಿಕ ಶತರುದ್ರ ಪಠಣ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ: ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯ ಗೋದೂಳಿ ಲಗ್ನ ಸುಮೂರ್ತದಲ್ಲಿ, ಸೂರ್ಯಾಸ್ತ ಪ್ರದೋಷ ಕಾಲದಲ್ಲಿ ನಡೆಯುವ ಸಾಮೂಹಿಕ ಶತರುದ್ರ ಪಠಣ ಕಾರ್ಯಕ್ರಮಕ್ಕೆ ಕನಪಾಡಿ ಪದ್ಮನಾಭ ರಾವ್ ಅವರ ನಿವಾಸದಲ್ಲಿ ಚಾಲನೆ ನೀಡಲಾಯಿತು.
ಕಳ್ಳಿಗೆ ಗ್ರಾಮದ ಕನಪಾಡಿಯಲ್ಲಿರುವ ಪದ್ಮನಾಭ ರಾವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಜೀಪಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದ ರೂವಾರಿಯಾಗಿ ರವಿಶಂಕರ ಮೈಯ್ಯ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಎಸ್ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸೀತಾರಾಮಮಯ್ಯ, ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ಅಧ್ಯಕ್ಷ ಕೆ. ರಮೇಶ್ ಹೊಳ್ಳ, ಕೆ. ರಾಜಾರಾಮ ಐತಾಳ, ಎ. ಧನೇಶ್ವರ ರಾವ್, ಮಿಥುನ ರಾವ್, ಕೆ. ಎಂ. ಶಾಂತರಾಮ ರಾವ್, ಕೃಷ್ಣ ಕುಮಾರ ಸೋಮಯಾಜಿ, ಎನ್. ರಾಮಚಂದ್ರ ಮೈಯ್ಯ, ಕೆ. ರಘುರಾಮ ರಾವ್, ಎಂ. ಜಯರಾಮ ಮೈಯ್ಯ, ಚಂದ್ರಮೋಹನ ರಾವ್, ಕೆ. ರಮೇಶ್ ರಾವ್, ಕೆ. ಶ್ರೀನಿವಾಸ ಹೊಳ್ಳ, ಕೆ. ಪರಮೇಶ್ವರ ಹೊಳ್ಳ, ನವನೀತ ರಾವ್, ಆದಿತ್ಯ ರಾವ್, ಪ್ರಣಿತ ರಾವ್, ನವೀನ್ ರಾವ್, ಶ್ರೀನಿಧಿ ರಾವ್, ಸುಧಾಕರ (ಯುಎಸ್ಎ), ಪದ್ಮನಾಭ ಹೊಳ್ಳ ಸೇರಿದಂತೆ ಹಲವರು ಭಾಗವಹಿಸಿದ್ದರು.

ಉಪನ್ಯಾಸಕರಾದ ರವಿಶಂಕರ್ ಸೇರಿದಂತೆ ಅನೇಕ ಭಕ್ತರು ಪಾರಾಯಣದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *