Breaking
11 May 2026, Mon

ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಅರ್ಚಕರ ವಸತಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ

ಬಂಟ್ವಾಳ: ತಾಲೂಕಿನ ಅನ್ನಪಾಡಿ ಸಜೀಪಮೂಡ ಶ್ರೀ ಕ್ಷೇತ್ರದ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಅರ್ಚಕರ ವಸತಿ ಗೃಹ ನಿರ್ಮಾಣಕ್ಕಾಗಿ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು.

ಈ ಸಂದರ್ಭ ಅರ್ಚಕ ಶ್ರೀನಿವಾಸ ಶಿವ, ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುಡ್ಡೆ, ಎಸ್. ಶ್ರೀಕಾಂತ್ ಶೆಟ್ಟಿ, ದಾಮೋದರ ಶೆಟ್ಟಿ, ಚಿನ್ನಯ್ಯ ಸಾಲಿಯಾನ್, ಪ್ರೇಮ್ ಜಿ. ಶೆಟ್ಟಿ, ಪದಾಧಿಕಾರಿಗಳಾದ ಲಿಂಗಪ್ಪ ದೋಟ, ಸುರೇಶ್ ಬಂಗೇರ, ವಿಶ್ವನಾಥ ಬೆಳ್ಚಡ, ಸುರೇಶ್ ಪೂಜಾರಿ, ದೇವದಾಸ್, ಪಂಚಾಯತ್ ಸದಸ್ಯ ವಿಜಯ, ಕುಶೇಶ್ ಅನ್ನಪಾಡಿ, ಯೋಗೀಶ್ ಬೆಳ್ಚಡ, ಗಿರೀಶ್ ಕುಮಾರ್, ನಿತಿನ್, ಅರಸ ಭಾಸ್ಕರ, ಜಯಪ್ರಕಾಶ್, ಶಂಕರ ದೋಟ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *