ಬಂಟ್ವಾಳ: ಬಿ.ಸಿ.ರೋಡ್‌ನ ಬೊಲ್ಪು ರೈತ ಉತ್ಪಾದಕ ಸಂಸ್ಥೆಯ ಆಶ್ರಯದಲ್ಲಿ ಅ. 27ರಂದು ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಗಣ್ಯರನ್ನು ಗುರುತಿಸಿ ಗೌರವಿಸಲಾಯಿತು.

ಸಾವಯವ ಕೃಷಿ ಸಾಧಕರಾದ ಕಾಂಪ್ರಬೈಲ್ ಆನಂದ ಶೆಟ್ಟಿ–ರಶ್ಮಿ ದಂಪತಿ, ಕೃಷಿ ಪೋಷಕರಾಗಿ ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಎಚ್. ನಾರಾಯಣ ಭಟ್, ಕಾರ್ಯದರ್ಶಿ ನಾಗೇಶ್ ಕುಲಾಲ್ ಹಾಗೂ ವಾಮದಪದವು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಬೊಲ್ಪು ರೈತ ಉತ್ಪಾದಕ ಸಂಸ್ಥೆಯ ಆಡಳಿತ ನಿರ್ದೇಶಕ ರಾಜ್ ಬಂಟ್ವಾಳ್ ಹಾಗೂ ಸುದ್ದಿ ಸಮೂಹ ಸಂಸ್ಥೆಯ ಡಾ. ಯು.ಪಿ. ಶಿವಾನಂದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಂಸ್ಥೆಯ ನಿರ್ದೇಶಕರಾದ ಜಗನ್ನಾಥ ಚೌಟ, ಸದಾನಂದ ಡಿ. ಶೆಟ್ಟಿ, ದೇವಪ್ಪ ಕುಲಾಲ್, ಸೀತಾರಾಮ ಶೆಟ್ಟಿ, ಕೃಷ್ಣಪ್ಪ ಸಪಲ್ಯ, ವಿಜಯ ರೈ, ಜಗದೀಶ ಭಂಡಾರಿ ಹಾಗೂ ಅರ್ವಿನ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸಿಇಒ ಹರ್ಷಿತ್ ಕುಮಾರ್ ಮತ್ತು ಕೃಷಿ ತಾಂತ್ರಿಕ ಅಧಿಕಾರಿ ಸ್ನೇಹ ಕೃಷಿ ಮಾಹಿತಿ ನೀಡಿದರು.





