Breaking
2 Jul 2026, Thu

ಸಜೀಪ ಮೂಡದಲ್ಲಿ ಅಗರಿ ಮಾಡ ಅಲಾಡಿ ಖಾನದ ನೂತನ ನಾಗ ಶಿಲಾ ಬಿಂಬ ಪ್ರತಿಷ್ಠೆ

ಬಂಟ್ವಾಳ: ತಾಲೂಕಿನ ಸಜೀಪ ಮೂಡ ಗ್ರಾಮದ ಅಗರಿ ಮಾಡ ಅಲಾಡಿ ಖಾನದಲ್ಲಿ ನೂತನ ನಾಗ ಶಿಲಾ ಬಿಂಬ ಪ್ರತಿಷ್ಠೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ಜರುಗಿತು.

ಎಂ ಸುಬ್ರಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಆಲಯ ಸ್ವೀಕಾರ, ಭೂಶುದ್ಧಿ ಹೋಮ, ಪುಣ್ಯಾಹ ಪಂಚಗವ್ಯ, ವಾಸ್ತು ರಕ್ಷೋಘ್ನ ಹೋಮ, ಅದಿವಾಸ ಹೋಮ, ಗಣ ಯಾಗ, ಪವಮಾನ ಹೋಮ, ಪ್ರತಿಷ್ಠ ಪ್ರಧಾನ ಹೋಮ, ಅಷ್ಟೋತ್ತರ ಶತಕಲಶ ಅಭಿಷೇಕ, ಫಲ ಪಂಚಾಮೃತ ಅಭಿಷೇಕ, ಪ್ರಾಯಶ್ಚಿತ್ತ ಹೋಮ, ಪ್ರಸನ್ನ ಪೂಜೆ, ವಟು ಆರಾಧನೆ, ಆಶ್ಲೇಷ ಬಲಿ ಪೂಜೆ, ಮಹಾಮಂಗಳಾರತಿ ಹಾಗೂ ಮಹಾಪೂಜೆಗಳು ವೈದಿಕ ಸಂಪ್ರದಾಯದಂತೆ ನಡೆಯಿತು

Leave a Reply

Your email address will not be published. Required fields are marked *