Breaking
7 May 2026, Thu

ಪಶ್ಚಿಮ ಬಂಗಾಳ ಬಿಜೆಪಿ ಗೆಲುವು ಶ್ಯಾಮ್ ಪ್ರಸಾದ್ ಮುಖರ್ಜಿ ಆತ್ಮಕ್ಕೆ ಶಾಂತಿ ಲಭಿಸಿದೆ :ಪ್ರಭಾಕರ ಪ್ರಭು

ಬಂಟ್ವಾಳ: ಪಶ್ಚಿಮ ಬಂಗಾಳ ರಾಜ್ಯವು ಅನೇಕ ಮಂದಿ ದೇಶ ಭಕ್ತ ಸ್ವಾತಂತ್ರ ಹೋರಾಟ ವೀರರಿಗೆ ಜನ್ಮ ನೀಡಿದ ಪುಣ್ಯ ಭೂಮಿಯಾಗಿದ್ದು ಸ್ವಾಮಿ ವಿವೇಕಾನಂದರು, ಅಜಾದ್ ಹಿಂದೂ ಸೇನೆಯ ಸುಭಾಸ್ ಚಂದ್ರ ಭೋಸ್, ವಂದೇ ಮಾತರಂ ಗೀತೆಯ ಬಂಕಿಮ್ ಚಂದ್ರ ಚಟರ್ಜಿ ಸೇರಿದಂತೆ ಹಲವಾರು ಮಂದಿ ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಪಶ್ಚಿಮ ಬಂಗಾಳದಲ್ಲಿ ಕಳೆದ 70 ವರ್ಷಗಳಿಂದ ರಾಜ್ಯವನ್ನು ಆಡಳಿತ ನಡೆಸಿದ ಕಾಂಗ್ರೆಸ್, ಕಮ್ಯುನಿಸ್ಟ್, ತೃಣ ಮೂಲ ಕಾಂಗ್ರೆಸ್ ಗಳಂತಹ ಮೂರು ರಾಜಕೀಯ ಪಕ್ಷಗಳು ದೇಶ ದ್ರೋಹದ ರಾಜಕೀಯ ಬೆಳವಣಿಗೆ ಮೂಲಕ ಅನೇಕ ಹಿಂಸಾಚಾರ, ಹತ್ಯೆಗಳಿಂದ ರಾಜ್ಯ ನಲುಗಿ ಹೋಗಿತ್ತು. ಇದೀಗ ರಾಷ್ಟ್ರಿಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿಯ ಸಂಘಟನಾ ಶಕ್ತಿಯಿಂದ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ದೇಶ ಭಕ್ತಿಯ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ ತೆಕ್ಕೆಗೆ ಬಂದಿದೆ.

ಈ ಅಭೂತ ಪೂರ್ವ ಜಯಭೇರಿಯಿಂದ ಆ ರಾಜ್ಯದ ಹಿಂದೂಗಳಲ್ಲಿ ಸಂತಸದ ಮನೆ ಮಾಡಿದೆ. ಈ ಗೆಲುವಿನಿಂದ ಜನ ಸಂಘದ ಸಂಸ್ಥಾಪಕರೂ ಹಾಗೂ ಪಶ್ಚಿಮ ಬಂಗಾಳದಲ್ಲಿಯೇ ಹುಟ್ಟಿ ಬೆಳೆದ ಕ್ರಾಂತಿ ಪುರುಷ ಡಾ!! ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ಲಭಿಸಿದಂತಾಗಿದೆ ಎಂದು ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೆತ್ರ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಬೂತ್ ಸಂಖ್ಯೆ 4 ರ ವತಿಯಿಂದ ಗ್ರಾಮ ಪಂಚಾಯತ್ ಸದಸ್ಯ ಸುನೀಲ್ ಶೆಟ್ಟಿಗಾರ್ ಮನೆಯಲ್ಲಿ ಆಯೋಜಿಸಲಾದ ಪಶ್ಚಿಮ ಬಂಗಾಳ ಗೆಲುವಿನ ಸಂಭ್ರಮಾಚರಣೆಯ ಕಾರ್ಯಕ್ರಮ ಸಂದರ್ಭದಲ್ಲಿ ಭಾರತ್ ಮಾತೆ ಹಾಗೂ ಡಾ!! ಶ್ಯಾಮ್ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದರು.

ಸಂಗಬೆಟ್ಟು ಮಹಾಶಕ್ತಿ ಕೇಂದ್ರ ಬಿಜೆಪಿ ಅಧ್ಯಕ್ಷ ಸತೀಶ್ ಪೂಜಾರಿ ಹಾಗೂ ಸಂಗಬೆಟ್ಟು ಶಕ್ತಿ ಕೇಂದ್ರ ಪ್ರಮುಖ್ ನವೀನ ಹೆಗ್ಡೆ ಶ್ಯಾಮ್ ಪ್ರಸಾದ್ ರವರ ರಾಷ್ಟ್ರ ಭಕ್ತಿಯ ಬಗ್ಗೆ ಹಾಗೂ ಪಕ್ಷ ಸಂಘಟನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ವಿನೋದ್ ಅಡಪ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುನೀಲ್ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್, ಬಿಜೆಪಿ ಬಂಟ್ವಾಳ ಮಂಡಲದ ಪರಿಶಿಷ್ಟ ಜಾತಿ ಮೋರ್ಚಾ ಕಾರ್ಯದರ್ಶಿ ರಾಜೇಶ್ ಸಂಗಬೆಟ್ಟು, ಸಿ. ಎ. ಬ್ಯಾಂಕ್ ನಿರ್ದೇಶಕ ವಿಶ್ವನಾಥ್ ಶೆಟ್ಟಿಗಾರ್, ಮಾಜಿ ನಿರ್ದೇಶಕ ದೇವರಾಜ್ ಸಾಲಿಯಾನ್ ಪಕ್ಷದ ಪ್ರಮುಖರಾದ ದೇವಪ್ಪ ಗೌಡ, ಭೋಜ ಶೆಟ್ಟಿಗಾರ್, ಜಯವರ್ಮಾ ಸಂಗಬೆಟ್ಟು, ಬಸವರಾಜ್ ಆಚಾರ್ಯ ಸಿದ್ದಕಟ್ಟೆ, ಶ್ರೀನಿವಾಸ ಕರ್ಕೇರ ಮಂಚಕಲ್ಲು, ಗಣೇಶ್ ಶೆಟ್ಟಿಗಾರ್ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಸುಂದರ ಶೆಟ್ಟಿಗಾರ್ ಸ್ವಾಗತಿಸಿ, ಧನ್ಯವಾದ ವಿತ್ತರು.

Leave a Reply

Your email address will not be published. Required fields are marked *