Breaking
29 Apr 2026, Wed

ಬ್ರಹ್ಮರ ಕೂಟ್ಲು ಟೋಲ್ ಗೇಟ್ ತೆರವಿಗೆ ಜನಾಂದೋಲನ ನಡಿಗೆ -ಇಂದು ತಾತ್ಕಾಲಿಕ ಬಂದ್ ಮುಂದೆ ಶಾಶ್ವತ ಬಂದ್ :ಮುನೀರ್ ಕಾಟಿಪಳ್ಳ

ಬಂಟ್ವಾಳ : ಇಂದು ಜನಾಂದೋಲನ ನಡಿಗೆಯ ಮೂಲಕ ಟೋಲ್ ಗೇಟ್ ತಾತ್ಕಾಲಿಕ ಬಂದ್ ಆಗಿದೆ ಮುಂದೆ ಶಾಶ್ವತವಾಗಿ ಬಂದ್ ಆಗಲಿದೆ, ಮುಂದಿನ ದಿನಗಳಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಸೇರಿ ಟೋಲ್ ತೆರವು ಹೋರಾಟ ದ್ವಿಗುಣಗೊಳಿಸಿ ಅವೈಜ್ಞಾನಿಕ ಟೋಲ್ ಬಂದ್ ಆಗುವ ವರೆಗೆ ವಿರಮಿಸುವುದಿಲ್ಲ, ಜನರ ತಾಳ್ಮೆಯನ್ನು ಕೇಂದ್ರ ಸರಕಾರ ಪರೀಕ್ಷಿಸುವುದು ಬೇಡ, ಟೋಲ್ ಗೇಟ್ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರ ನಿಲುವು ಏನು ಎಂದು ಸ್ಪಷ್ಟಪಡಿಸಲಿ ಎಂದು ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿದರು.

ಅವರು  ಬ್ರಹ್ಮರಕೂಟ್ಟುವಿನಲ್ಲಿರುವ ಟೋಲ್ ಗೇಟ್ ತೆರವು ಹೋರಾಟ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ  ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಟು ಟೋಲ್ ಗೇಟ್ ವರೆಗೆ ಏ.28ರ ಮಂಗಳವಾರ ಸಂಜೆ  ನಡೆದ ಜನಾಂದೋಲನ ನಡಿಗೆಯಲ್ಲಿ ಮಾತನಾಡಿದರು.

ಜನಾಂದೋಲನ ನಡಿಗೆ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಬ್ರಹ್ಮರಕೂಟ್ಟುವಿನಲ್ಲಿರುವ ಟೋಲ್‌ ಅವೈಜ್ಞಾನಿಕವಾಗಿದ್ದು, ಸಮಾನ ಮನಸ್ಕ ಸಂಘಟನೆಯ ಸಹಕಾರದೊಂದಿಗೆ ಇದನ್ನು ತೆರವುಗೊಳಿಸುವವರೆಗೂ ವಿವಿಧ ಹೋರಾಟ ನಡೆಸುತ್ತೇವೆ.

ದಕ್ಷಿಣ ಕನ್ನಡ ಜಿಲ್ಲೆಯ ಜನಜಾಗೃತಿಗಾಗಿ ಜನಾಂದೋಲನ ನಡಿಗೆ ಎಂದರು.ಮಾಜಿ ಸಚಿವ ಬಿ.ಅಭಯಚಂದ್ರ ಜೈನ್ ಮಾತನಾಡಿ, ಸುರತ್ಕಲ್ ನಲ್ಲಿ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಈಗಾಗಲೇ ಟೋಲ್ ಗೇಟ್ ಬಂದ್ ಆಗಿದೆ, ಮುಂದಿನ ದಿನಗಳಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಬ್ರಹ್ಮರಕೊಟ್ಲು ಟೋಲ್ ಗೇಟ್ ಬಂದ್ ಆಗಲಿದೆ ಎಂದರು.

ಸಮಾನ ಮನಸ್ಕ ಸಮನ್ವಯ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ, ಬಿ.ಶೇಖರ್, ಪಿಯೂಸ್ ಎಲ್. ರೋಡ್ರಿಗಸ್‌,ಅಶ್ವಿನ್ ಕುಮಾರ್ ರೈ, ಸುದರ್ಶನ್ ಜೈನ್, ಪದ್ಮಶೇಖರ ಜೈನ್‌, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದ‌ರ್, ಕೆ.ಸಂಜೀವ ಪೂಜಾರಿ,ಸುದೀಪ್ ಕುಮಾರ್ ಶೆಟ್ಟಿ ಮಾಣಿ , ಇಬ್ರಾಹಿಂ ನವಾಝ್, ಸೊಹೈಲ್ ಕಂದಕ್, ಶಬೀರ್ ಸಿದ್ದಕಟ್ಟೆ, ಬಿ.ಎಂ.ಅಬ್ಬಾಸ್ ಆಲಿ, ಮಮತಾ ಗಟ್ಟಿ,ಶೈಲಜಾ ರಾಜೇಶ್, ಬಿ.ಎಂ. ಭಟ್, ಸುರೇಶ್ ಕುಮಾ‌ರ್, ಉಮ್ಮರ್ ಕುಂಞ ಸಾಲೆತ್ತೂರು, ಪದ್ಮನಾಭ ರೈ, ಚಿತ್ತ ರಂಜನ್ ಶೆಟ್ಟಿ, ಸುರೇಶ ಕುಮಾರ್ ನಾವೂರ,

ಮನೋಹರ ನೆರಾಂಬೊಳು, ಸಹಿತ ಅನೇಕ ಮುಖಂಡರು, ಜಿಪಂ, ತಾಪಂ, ನಗರಸಭೆ, ಪುರಸಭೆಯ ಮಾಜಿ ಸದಸ್ಯರು, ನಾನಾ ತಾಲೂಕುಗಳ ಪ್ರಮುಖರು ಉಪಸ್ಥಿತರಿದ್ದರು.

ಕಾಲ್ನಡಿಗೆ ಬಿ.ಸಿ.ರೋಡಿನಿಂದ ಆರಂಭಗೊಂಡು, ಟೋಲ್ ವರೆಗೆ ಸಾಗುವವರೆಗೆ ಹಲವು ಮುಖಂಡರು ಜತೆಗೂಡಿದರು.

Leave a Reply

Your email address will not be published. Required fields are marked *